March 15, 2026
WhatsApp Image 2023-10-22 at 6.15.59 PM

ಉಡುಪಿ: ಸ್ನಾನ ಮಾಡಲು ನದಿಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ಬೆ ಸಂಜೆ ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ ನಡೆದಿದೆ.ಕರ್ಜೆ ನಿವಾಸಿ ಉಮೇಶ್ ಶೆಟ್ಟಿ(48) ಹಾಗೂ ಚಾರಾ ಹುರ್ತುಕೆ ನಿವಾಸಿ ಪ್ರಸ್ತುತ್ ಹೆಗ್ಡೆ(21) ಮೃತ ದುರ್ದೈವಿಗಳು. ಇವರಿಬ್ಬರು ಸ್ನಾನಕ್ಕೆಂದು ಮತ್ತಾವು ನದಿಗೆ ತೆರಳಿದ್ದರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಇವರ ಮೊಬೈಲ್ ಪೋನ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿ ಹುಡುಕಾಟ ನಡೆಸಿದ್ದರು. ರಾತ್ರಿ ಅವರಿಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಗುರುತಿಸಲಾಗಿದೆ. ಪ್ರಸ್ತುತ್ ಹೆಗ್ಡೆ ಅಂತಿಮ ವರ್ಷ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.