March 15, 2026
WhatsApp Image 2023-10-14 at 9.57.51 AM

ಮಂಗಳೂರು: ಹಮಾಸ್ ಉಗ್ರರನ್ನು ಬೆಂಬಲಿಸಿ ಮಂಗಳೂರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಘಟನೆ ನಡೆದಿದೆ.

ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳೆಂದು ಮಂಗಳೂರಿನ ಝಾಕಿರ್ ಕರೆದಿದ್ದಾನೆ. ಅಲ್ಲದೆ ಹಮಾಸ್ ಉಗ್ರರರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ  ಝಾಕಿರ್ ಕರೆ ನೀಡಿದ್ದಾನೆ. ಪ್ಯಾಲಿಸ್ಟೈನ್ , ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸೋಣ, ಹಮಾಸ್ ಉಗ್ರರರು ದೇಶ ಪ್ರೇಮಿ ಯೋಧರು ಎಂದು ಬಣ್ಣಿಸಿದ್ದಾನೆ.

ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬನ್‌ ಎಂಬ ಹೆಸರಿನಲ್ಲಿ ಝಾಕಿರ್ ಗುರುತಿಸಿಕೊಳ್ಳುತ್ತಿದ್ದ. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ‌ ಸಲ್ಲಿಸುವಂತೆ ಝಾಕಿರ್ ಕರೆ ನೀಡಿದ್ದಾನೆ. ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಹಿಂದೂ‌ ಸಂಘಟನೆಗಳಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ. ಝಾಕಿರ್ ನನ್ನು ಈ ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆಗಳ ಒತ್ತಾಯಿಸಿವೆ.

About The Author

Leave a Reply

Your email address will not be published. Required fields are marked *

You cannot copy content of this page.