March 14, 2026
WhatsApp Image 2023-08-10 at 12.37.28 PM

ಮಂಗಳೂರು: 11 ವರ್ಷ ಕಳೆದರೂ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಮಾಡಿದ ಹಂತಕರು ಯಾರೆಂದು ಇನ್ನೂ ಬಯಲಾಗಿಲ್ಲ. ಆದ್ದರಿಂದ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳು ಯಾರೆಂದು ತಿಳಿಸಿಕೊಡಬೇಕೆಂದು ನೂರಾರು ಮಂದಿ ಇಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವರ ಮೊರೆ ಹೊಕ್ಕರು.

ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರ ನೇತೃತ್ವದಲ್ಲಿ ಸೌಜನ್ಯಾ ತಾಯಿ ಕುಸುಮಾವತಿಯವರು ಸೇರಿದಂತೆ ನೂರಾರು ಮಂದಿ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಅತ್ಯಾಚಾರ ಹಾಗೂ ಕೊಲೆ ಮಾಡಿದವರು ಯಾರೆಂದು ಬಯಲಾಗಬೇಕು. ಅವರಿಗೆ ಶಿಕ್ಷೆಯಾಗಬೇಕು. ಈ ಮೂಲಕ ಮೃತ ಸೌಜನ್ಯಾಳಿಗೆ ನ್ಯಾಯ ಸಿಗಬೇಕೆಂದು ಎಲ್ಲರೂ ಕದ್ರಿ ಶ್ರೀ ಮಂಜುನಾಥ ದೇವರ ಮೊರೆಹೊಕ್ಕರು. ಕದ್ರಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಲ್ಲಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿ ಶೀಘ್ರ ನ್ಯಾಯ ಸಿಗಬೇಕು. ಅಲ್ಲದೆ ಇದೇ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ‌ಮಾಡುವುದು ಅಂತ್ಯವಾಗಬೇಕು. ಆ ರೀತಿಯಲ್ಲಿ ನ್ಯಾಯ ಸಿಗಬೇಕೆಂದು ಎಲ್ಲರೂ ಪ್ರಾರ್ಥನೆ ಮಾಡಿದರು.

About The Author

Leave a Reply

Your email address will not be published. Required fields are marked *

You cannot copy content of this page.