
ಬೆಂಗಳೂರು: ನಾಲ್ಕು ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಿದ್ದ ಟೆಕ್ಕಿ ವಿಜಯ್ ತನ್ನ ಪುಟ್ಟ ಮಕ್ಕಳೊಂದಿಗೆ ಹೆಂಡ್ತಿ ಶವದ ಜೊತೆ ಒಂದು ದಿನ ಕಾಲ ಕಳೆದಿದ್ದ ಎನ್ನಲಾಗಿದೆ. ಸದ್ಯ ಲಭ್ಯವಾಗಿರುವ ಪ್ರಕಾರ ಮೊದಲು ಟೆಕ್ಕಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.
ಅಮ್ಮನ್ನ ಸಾವನ್ನು ನೋಡಿ ಅಳುತ್ತಿದ್ದರು ಎನ್ನಲಾಗಿದೆ.
ಇದೇ ವೇಳೆ ಮಕ್ಕಳು ಅಳಲಾರಂಭಿಸದ್ರಿಂದ ಮಕ್ಕಳನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬೇರೆ ದಾರಿಯಿಲ್ಲದೆ ಮಕ್ಕಳನ್ನು ಸಾಯಿಸಿ ಕೊನೆಗೆ ತಾನೂ ಕೂಡ ಸಾವನ್ನಪ್ಪಿದ್ದಾನೆ, ಎಫ್ ಎಸ್ ಎಲ್ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆ ವೇಳೆ ಈ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಇದೇ ವೇಳೆ ತನಿಖೆ ವೇಳೆಯಲ್ಲಿ, ಹೇಮಾವತಿ ಮೃತದೇಹ ಡಿ ಕಾಂಪೋಸ್ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ, ಉಳಿದ ಮೂವರ ಮೃತದೇಹಗಳು ಇನ್ನೂ ಡಿಕಾಂಪೋಸ್ ಸ್ಥಿತಿಗೆ ತಲುಪಿರಲಿಲ್ಲ. ಎನ್ನುವುದನ್ನು ಕೂಡ ಕಂಡು ಕೊಂಡಿದ್ದಾರೆ ಹೀಗಾಗಿ ಮೊದಲು ಟೆಕ್ಕಿ ವಿಜಯ್ ಪತ್ನಿಯನ್ನು ಕೊಲೆ ಮಾಡಿದ ಒಂದು ದಿನದ ಬಳಿಕ ಮೊದಲು ಮಕ್ಕಳು ಕೊನೆಗೆ ತಾನು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಅಂದ ಹಾಗೇ ಕ್ಕಿ ವಿಜಯ್ ಪತ್ನಿ ಹೇಮಾವತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿರುವ ಶಂಕೆಯಿದೆ ಎನ್ನಲಾಗಿದೆ.
