March 14, 2026
WhatsApp Image 2023-07-21 at 6.51.47 PM
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್‌ ನೀಡಿರುವುದಕ್ಕೆ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನೀಲ್‌ ಕುಮಾರ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಜಿ ಸಚಿವ ಸುನೀಲ್‌ ಕುಮಾರ್‌ ಟ್ವೀಟರ್‌ ಮಾಡಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೋಮು ಗಲಭೆ ನಿಯಂತ್ರಣದ ಹೆಸರಿನಲ್ಲಿ ಹಿಂದುಗಳು ಹಾಗೂ ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ದ್ವೇಷದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಇವರಿಗೆ ಮಂಗಳೂರು ಪೊಲೀಸರು ಗಡಿಪಾರು ನೋಟಿಸ್ ನೀಡಿದ್ದಾರೆಂಬ ಮಾಹಿತಿ ಲಭಿಸಿದ್ದು, ಇದು ದ್ವೇಷ ರಾಜಕಾರಣದ ಪರಮಾವಧಿಯಾಗಿದೆ  ಎಂದಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.