
ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅಸ್ವಸ್ಥಳಾಗಿದ್ದರೂ ಪರೀಕ್ಷೆಗಾಗಿ ಶಾಲೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ ಮರುದಿನದ ನಂತರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಲಕಿಯನ್ನು 11 ವರ್ಷದ ಆರಾಧ್ಯ ಖಂಡೇಲ್ವಾಲ್ ಎಂದು ಗುರುತಿಸಲಾಗಿದ್ದು, ಫರಿದಾಬಾದ್‌ನ ಸಿಬಿಎಸ್‌ಇ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು.
ಜುಲೈ 13 ರಂದು ಆಕೆ ಸಾವನ್ನಪ್ಪಿದ್ದಾಳೆ. ಜುಲೈ 12 ರಂದು ಶಾಲೆಯಲ್ಲಿ ಆರೋಗ್ಯ ಸರಿಯಿಲ್ಲ ಎಂದು ತನ್ನ ತರಗತಿಯ ಶಿಕ್ಷಕರಿಗೆ ತಿಳಿಸಿದ್ದರೂ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಲೆಯು ಎಕ್ಲಸಾಂ ಬರೆಸಿದೆ ಎಂದು ಆರಾಧ್ಯ ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರಾಧ್ಯ ಸಹಪಾಠಿಯ ತಾಯಿ, 11 ವರ್ಷದ ಮಗು ತನ್ನ ಗಣಿತ ಪರೀಕ್ಷೆಯನ್ನು ಪೂರ್ಣಗೊಳಿಸಲು ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ರೂ ಆಕೆಗೆ ಬಲವಂತ ಮಾಡಲಾಗಿತ್ತು ಎಂದಿದ್ದಾರೆ.
ಆರಾಧ್ಯ ತರಗತಿಯಲ್ಲಿ ವಾಂತಿ ಮಾಡಿಕೊಂಡಿದ್ದಳು. ಆದರೆ, ಮನೆಗೆ ಹೋಗಲು ಬಿಡಲಿಲ್ಲ. ಆರಾಧ್ಯ ಅಸ್ವಸ್ಥಳಾಗಿದ್ದರೂ ಆಕೆಯ ಆರೋಗ್ಯದ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.
