March 14, 2026
WhatsApp Image 2023-07-11 at 3.09.03 PM

ಉಡುಪಿ : ಗದ್ದೆಯಲ್ಲಿ ಉಳುಮೆ ಮಾಡುವಾಗ ಕಳೆದು ಹೋದ ಹಣ ಕೊರಗಜ್ಜನಿಗೆ ಹರಕೆ ಹೊತ್ತ ಕೆಲವೇ ಕ್ಷಣದಲ್ಲಿ ಮರಳಿ ದೊರೆತ ಘಟನೆ ಆರೂರು ಕುರುಡುಂಜೆಯಲ್ಲಿ ಸೋಮವಾರ ನಡೆದಿದೆ.

ಬ್ರಹ್ಮಾವರದ ಕುರುಡುಂಜೆಯ ಗದ್ದೆಯಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಲು ಬಂದ ಶಿವಮೊಗ್ಗದ ಗಣೇಶ್‌ ಎನ್ನುವವರು ಸಂಪಾದನೆ ಮಾಡಿದ್ದ ಸುಮಾರು 25 ಸಾವಿರ ಹಣವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟಿದ್ದರು, ಕೆಲಸ ಮುಗಿಸಿ ನೋಡುವಾಗ ಹಣ ಕಳೆದು ಹೋಗಿತ್ತು. ಗಾಬರಿಗೊಂಡ ಅವರು ಊರಿನವರಿಗೆ ತಿಳಿಸಿ ಹತ್ತಾರು ಜನರೊಂದಿಗೆ ಹುಡುಕಿದರೂ ಗದ್ದೆಯಲ್ಲಿ ಹಣ ಸಿಗಲಿಲ್ಲ.

ಅದೇ ಸಮಯಕ್ಕೆ ಆಗಮಿಸಿದ ಕೊರಗಜ್ಜನ ಭಕ್ತ ಮಹೇಶ್‌ ಶೆಟ್ಟಿ ಅವರು ವಿಷಯ ತಿಳಿದು ಹಣ ದೊರೆತರೆ ಆರೂರು ಕುರುಡುಂಜೆ ಕೊರಗಜ್ಜನಿಗೆ ಕಳ್ಳು, ಬೀಡ, ಚಕ್ಕುಲಿಯೊಂದಿಗೆ ಆ ಹಣದಲ್ಲಿ ಒಂದು ಸಾವಿರ ನೀಡುವೆ ಎಂದು ಹರಕೆ ಹೊತ್ತು ಗದ್ದೆಗೆ ಇಳಿದೇ ಬಿಟ್ಟರು. 4 ಹೆಜ್ಜೆ ಹಾಕುತ್ತಲೇ ಅವರ ಕಾಲಿಗೆ ಕೆಸರಲ್ಲಿ ಸಿಕ್ಕಿತು 25 ಸಾವಿರ ಹಣದ ಕಟ್ಟು. ಇದು ಕೊರಗಜ್ಜನ ಪವಾಡವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

 

About The Author

Leave a Reply

Your email address will not be published. Required fields are marked *

You cannot copy content of this page.