December 23, 2024
WhatsApp Image 2022-11-09 at 9.55.47 AM

ಮಂಗಳೂರು: ನಗರದ ಹೊರವಲಯದಲ್ಲಿರುವ ಗುರುಪುರ ಬಳಿಯ ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಿಂದ ಇಂದು ತೀರ್ಪು ಹೊರ ಬರುವ ಸಾಧ್ಯತೆಯಿದೆ.

ಮಳಲಿ ಮಸೀದಿ ನವೀಕರಣದ ವೇಳೆ ಹಿಂದೂ ದೇವಾಲಯ ಶೈಲಿಯ ಪಾರಂಪರಿಕ ಕಟ್ಟಡ ಪತ್ತರಯಾಗಿತ್ತು. ಆ ಬಳಿಕ ಹಿಂದೂ ಸಂಘಟನೆಗಳು ಮಳಲಿ ಭಜನಾಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ಆ ಜಾಗದಲ್ಲಿ ಹಿಂದೆ ಶಿವನಿಗೆ ಸಂಬಂಧಿಸಿದ ಗುರು ಪೀಠವಿತ್ತು ಎಂಬ ಅಂಶ ಉಲ್ಲೇಖವಾಗಿತ್ತು. ಈ ಹಿನ್ನಲೆಯಲ್ಲಿ ಮಸೀದಿ ಇರುವ ಸ್ಥಳದ ಕೋರ್ಟ್ ಕಮೀಷನರ್ ಮೂಲಕ ವಿಎಚ್ ಪಿ ಸರ್ವೇಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿತ್ತು.

ಮಸೀದಿ ನವೀಕರಣಕ್ಕೆ ತಡೆಕೋರಿಯೂ ವಿಎಚ್ ಪಿ ಅರ್ಜಿ ಹಾಕಿತ್ತು. ಈ ಅರ್ಜಿಯ ಕುರಿತಾಗಿ ಇಂದು ನ್ಯಾಯಾಲಯದಿಂದ ತೀರ್ಪು ಹೊರಬರುವ ಸಾಧ್ಯತೆಯಿದೆ.

About The Author

Leave a Reply

Your email address will not be published. Required fields are marked *

You cannot copy content of this page.