
ಬೆಳ್ತಂಗಡಿ, ಮೇ 6: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ವಾರ್ತಾಭವನ ಕಟ್ಟಡದಲ್ಲಿದ್ದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಚೇರಿಯನ್ನು ಮಿನಿವಿಧಾನ ಸೌಧದ ಪಕ್ಕದಲ್ಲಿರುವ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ನ ಎರಡನೇ ಮಹಡಿಗೆ ಸ್ಥಳಾಂತರ ಮಾಡಲಾಗಿದ್ದು, ನೂತನ ತಾತ್ಕಾಲಿಕ ಕಚೇರಿಯನ್ನು ಇಂದು ಸರಳ ರೀತಿಯಲ್ಲಿ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು.



ಬೆಳ್ತಂಗಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದ್ದು, ಇದಕ್ಕಾಗಿ ವಾರ್ತಾಭವನ ಕಟ್ಟಡವೂ ತೆರವುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ಕಚೇರಿ ಸ್ಥಳಾಂತರವಾಗಿದ್ದು, ಮುಂದಿನ ದಿನಗಳಲ್ಲಿ ಪತ್ರಿಕಾಗೋಷ್ಠಿಗಳು ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ನಲ್ಲಿರುವ ಪತ್ರಿಕಾಭವನದಲ್ಲಿ ಕಚೇರಿಯಲ್ಲಿ ನಡೆಯಲಿದೆ.
