ವೇಣೂರು, ಎ. 18: ಪಂಚಾಯತ್ ವತಿಯಿಂದ ಕುಡಿಯುವ ನೀರು ಸಂಪರ್ಕ ಪಡೆದುಕೊಂಡಿರುವ ಬಳಕೆದಾರರು ನೀರನ್ನು ಕಟ್ಟಡ ಕಾಮಗಾರಿಗೆ, ತೋಟಕ್ಕೆ ಹಾಗೂ ಇನ್ನಿತ್ತರ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ನೀರು ಸಂಪರ್ಕವನ್ನು ಕಡಿತಗೊಳಿಸಿ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವೇಣೂರು ಗ್ರಾ.ಪಂ. ಎಚ್ಚರಿಕೆ ನೀಡಿದೆ.
ಬೇಸಿಗೆಯ ಕೊನೆಯ ಹಂತದ ಈ ಸಮಯದಲ್ಲಿ ನೀರನ್ನು ಬಹಳಷ್ಟು ಎಚ್ಚರಿಕೆಯಿಂದ ಬಳಕೆ ಮಾಡಬೇಕಾಗುತ್ತದೆ. ಕುಡಿಯುವ ನೀರು ಇನ್ನಿತ್ತರ ಉದ್ದೇಶಕ್ಕೆ ಬಳಸುವುದರಿಂದ ಎತ್ತರದ ಪ್ರದೇಶದ ಗ್ರಾಮಸ್ಥ ಬಳಕೆದಾರರಿಗೆ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ. ಕೊಳವೆ ಬಾವಿಯಲ್ಲೂ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆ ಕಾಲದ ನೀರಿನ ಕೊರತೆಯನ್ನು ನೀಗಿಸಲು ಗ್ರಾಮ ಪಂಚಾಯತ್‌ನೊಂದಿಗೆ ಕೈಜೋಡಿಸಬೇಕು ಎಂದು ಪಂಚಾಯತ್ ತಿಳಿಸಿದೆ.