January 15, 2025
WhatsApp Image 2023-06-10 at 10.00.41 AM

ಮಂಗಳೂರು: ಸುರತ್ಕಲ್‌ ಚೊಕ್ಕಬೆಟ್ಟು ಬಳಿ ಕೆಲವು ಮಂದಿ ಮಕ್ಕಳು ಕೊಂಕಣ ರೈಲು ಮಾರ್ಗದ ಹಳಿಗೆ ಕಲ್ಲು ತೂರಾಟ ಮತ್ತು ಟ್ರ್ಯಾಕ್‌ ಮೇಲೆ ಕಲ್ಲು ಇರಿಸಿ ಅಪಘಾತ ನಡೆಸಲು ಷಡ್ಯಂತ್ರ ನಡೆಸಿದ ಘಟನೆ ಮೇ 30 ರಂದು ನಡೆದಿದೆ.

ಯಶವಂತಪುರ ಬೆಂಗಳೂರು- ಕಾರವಾರ ರೈಲಿಗೆ ಬೆಳಗ್ಗಿನ ವೇಳೆ ಕಲ್ಲು ತೂರಾಟ ಕೂಡಾ ಮಾಡಲಾಗಿತ್ತು. ಹಳಿಗಳ ಮೇಲೆ ಕೆಲವು ಕಡೆ ಕಲ್ಲುಗಳನ್ನು ಇರಿಸಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಸ್ಥಳೀಯ ಧಾರ್ಮಿಕ ಕೇಂದ್ರವೊಂದರ ಮುಖಂಡರ ಮುಖಾಂತರ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಸುರಕ್ಷತಾ ಪಡೆಯ ಪೊಲೀಸರು ಜೂನ್‌ 5 ರಂದು ಮಾಹಿತಿ ನೀಡಿ ಇಂತಹ ಕೃತ್ಯಗಳಿಗೆ ನೀಡಲಾಗುವ ಶಿಕ್ಷೆಯ ಬಗ್ಗೆ ಮನವರಿಕೆ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.