ಮೂಲ್ಕಿ:ಕಾಲೇಜು ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಡಿ ಎಂಬಲ್ಲಿ ನಡೆದಿದೆ.
ಅಮಿತಾ ಬಿವಿ (34) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಓರ್ವ ಮಗಳಿದ್ದಾಳೆ.ಅಮಿತಾ ಅವರಿಗೆ ವಿವಾಹವಾಗಿ 12 ವರ್ಷಗಳಾಗಿದ್ದು ತಾಯಿ ಮನೆಯಿಂದ ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಮ್ಮ ಬೆಡ್ ರೂಮ್ ನ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಮಿತಾ ವಾಮದಪದವು ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.