ಕಾರ್ಕಳ : ರಸ್ತೆ ಮಧ್ಯೆ ಖಾಸಗಿ ಬಸ್ ಕಂಡಕ್ಟರ್ ಮತ್ತು ಕೆಎಸ್ ಆರ್ ಟಿಸಿ ಬಸ್ ಚಾಲಕರಿಬ್ಬರು ಸಾರ್ವಜನಿಕವಾಗಿಯೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಕಾರ್ಕಳ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಬಸ್ ಗೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ಖಾಸಗಿ ಬಸ್ ಕಂಡಕ್ಟರ್ ನಿಂದಿಸಿದ್ದು, ಇದರಿಂದ ಕೋಪಗೊಂಡು ಕಂಡಕ್ಟರ್ ಮೇಲೆ ಬಸ್ ಚಾಲಕ ಸೈಯದ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೆಎಸ್ಆರ್‌ಟಿಸಿ ಚಾಲಕನ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಅವನ ಮೇಲೆ ಇಲಾಖಾ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..