ಮಾನಸಿಕ ಖಿನ್ನತೆಗೊಳಗಾದ ವ್ಯಕ್ತಿಯೊಬ್ಬ ಬಾಳೆಹಣ್ಣೊಂದನ್ನು ಕಾಂಡೋಮ್ ಒಳಗೆ ಹಾಕಿ ನುಂಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
34 ವರ್ಷದ ಈ ವ್ಯಕ್ತಿ ವಿಚಿತ್ರವಾದ ಶೈಲಿಯಲ್ಲಿ ಬಾಳೆಹಣ್ಣನ್ನು ಸೇವಿಸಿದ್ದು, ನಂತ್ರ, ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಅನುಭವಿಸಿದ್ದಾನೆ.
ಬಾಳೆಹಣ್ಣು ಕರುಳಿನ ಮಧ್ಯೆ ಸಿಲುಕಿದ್ದರಿಂದ ಆತನಿಗೆ ಆಹಾರ ಅಥವಾ ದ್ರವದಂತಹ ಪಾನೀಯವನ್ನೂ ಸಹ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆಸ್ಪತ್ರೆಯೊಂದಕ್ಕೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.
ವೈದ್ಯರು ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ, ಆ ವ್ಯಕ್ತಿಯ ಸಣ್ಣ ಕರುಳಿನಲ್ಲಿ ಕಾಂಡೋಮ್ ಸುತ್ತಿದ ಬಾಳೆಹಣ್ಣು ಅಡ್ಡಿಯಾಗಿರುವುದು ಕಂಡುಬಂದಿದ್ದು, ವೈದ್ಯರೂ ಸಹ ಆಘಾತಕ್ಕೊಳಗಾಗಿದ್ದಾರೆ. ನಂತ್ರ, ಚಿಕಿತ್ಸೆ ಮೂಲಕ ಅದನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಮೂರು ದಿನಗಳ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಈ ಪ್ರಕರಣವು ವೈದ್ಯಕೀಯ ನಿಯತಕಾಲಿಕಗಳಲ್ಲಿ ಇದು ವಿಶ್ವದ ಮೊದಲ ಪ್ರಕರಣವಾಗಿದೆ. ಕಾಂಡೋಮ್‌ನಲ್ಲಿ ಯಾರಾದರೂ ಬಾಳೆಹಣ್ಣನ್ನು ನುಂಗಿದ ಮೊದಲ ನಿದರ್ಶನ ಇದಾಗಿದೆ. ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ ಪ್ರಕರಣದ ಅಧ್ಯಯನವನ್ನು ದಾಖಲಿಸಿದೆ ಮತ್ತು ಅದರ ದಾಖಲೆಗಳಲ್ಲಿ ಅದರ ವಿವರಗಳನ್ನು ಪಟ್ಟಿ ಮಾಡಿದೆ.