ಗಾಜಿಯಾಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು ಕೊಂದು ಅವನ ದೇಹವನ್ನು ಅನೇಕ ತುಂಡುಗಳನ್ನಾಗಿ ಕತ್ತರಿಸಿ, ಅದನ್ನು ಕಸದ ರಾಶಿಗೆ ಎಸೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಮೀಲಾಲ್ ಪ್ರಜಾಪತಿ ಕೊಲೆಯ ಆರೋಪಿ.
ಮೀಲಾಲ್‌ಗೆ ಒಂದು ಹೆಣ್ಣು ಮಗುವೆದೆ. ಆದ್ರೂ, ಆತನ ಪತ್ನಿ ಗಾಜಿಯಾಬಾದ್ ನಿವಾಸಿ ಅಕ್ಷಯ್ ಜೊತೆಗಿನ ವಿವಾಹೇತರ ಸಂಬಂಧವನ್ನು ಮುಂದುವರೆಸಿದ್ದಳು. ಈ ಸುದ್ದಿ ತಿಳಿದು ಮೀಲಾಲ್ ಕೋಪಗೊಂಡಿದ್ದ, ಅಷ್ಟೇ ಅಲ್ಲದೇ, ಅಕ್ಷಯ್ ಅನ್ನು ಕೊಲ್ಲ ಬೇಕೆಂದು ಆಗಲೇ ನಿರ್ಧರಿಸಿದ್ದ.
ಮೀಲಾಲ್ ಇಲ್ಲದಿದ್ದಾಗ, ಅಕ್ಷಯ್ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಪತ್ನಿ ಚಹಾ ಮಾಡಿದ್ದಳು. ಈ ಕುದಿಯುತ್ತಿದ್ದ ಚಹಾ ಮಗಳ ಕಾಲಿಗೆ ಬಿದ್ದ ಪರಿಣಾಮ ಸುಟ್ಟ ಗಾಯಗಳಾದವು. ಮೀಲಾಲ್ ಬಂದಾಗ ಮಗಳ ಸ್ಥಿತಿಯನ್ನು ನೋಡಿ, ಕೂಡಲೇ ತನ್ನ ಮಗಳನ್ನು ಆಸ್ಪತ್ರೆಗೆ ಕರೆದೊಯ್ದನು. ಮಗಳನ್ನು ನೋಡಿಕೊಳ್ಳುವ ಸಲುವಾಗಿ ಮೀಲಾಲ್ ಆಸ್ಪತ್ರೆಯಲ್ಲೇ ಉಳಿದುಕೊಂಡ.
ಮೀಲಾಲ್, ತನ್ನ ಉದ್ದೇಶವನ್ನು ತಿಳಿಸದೇ, ಆಸ್ಪತ್ರೆಯಲ್ಲಿ ತಮ್ಮ ಮಗಳೊಂದಿಗೆ ನಿರತರಾಗಿರುವ ಕಾರಣ ಮನೆಗೆಲಸದಲ್ಲಿ ಸಹಾಯ ಮಾಡಲು ಅಕ್ಷಯ್‌ಗೆ ಕರೆ ಮಾಡಲು ಪತ್ನಿಗೆ ಹೇಳಿದ್ದನು. ಈ ಕಾರಣದಿಂದ ಅಕ್ಷಯ್ ಅವರ ಮನೆಗೆ ಬಂದ. ಈ ಸಮಯವನ್ನೇ ಉಪಯೋಗಿಸಿಕೊಂಡ ಮೀಲಾಲ್ ಅಕ್ಷಯ್‌ನ ಕತ್ತು ಸೀಳಿ ದೇಹವನ್ನು ಕತ್ತರಿಸಿದನು. ಸಾಕ್ಷ್ಯಾ ನಾಶ ಪಡಿಸಲು ದೇಹದ ಭಾಗಗಳನ್ನು ಗೋಣಿಚೀಲಗಳಲ್ಲಿ ತುಂಬಿ ಗಾಜಿಯಾಬಾದ್‌ನ ಕಸದ ರಾಶಿಯ ಮೇಲೆ ಎಸೆದಿದ್ದಾನೆ.
ಕೆಲವರು ಕಸದ ರಾಶಿಯಲ್ಲಿ ದೇಹದ ಭಾಗಗಳನ್ನು ನೋಡಿ ಪೊಲೀಸರಿಗೆ ಕರೆ ಮಾಡಿದರು. ತನಿಖೆಯ ನಂತರ ನಾವು ಮೀಲಾಲ್ ಅನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ದೀಕ್ಷಾ ಶರ್ಮಾ ಹೇಳಿದ್ದಾರೆ.