ಮಂಗಳೂರು: ತಣ್ಣೀರಬಾವಿ ಲಾಠಿ ಚಾರ್ಜ್ ಪ್ರಕರಣ – ಪೊಲೀಸ್ ಕಾನ್ಸ್‌ಟೇಬಲ್ ಸಸ್ಪೆಂಡ್

ಮಂಗಳೂರು: ತಣ್ಣೀರಬಾವಿ ಬೀಚ್‌ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಹಾಗೂ 6 ನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಏಟು ಬೀಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸುನೀಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರಬಾವಿ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಸುನೀಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಕುರಿತು ಯಾರಿಂದಲೂ ಪೋಷಕರು ಅಥವಾ ಬಾಲಕನಿಂದಾಗಲಿ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.

ಜ.1 ರಂದು ಘಟನೆ ನಡೆದಿದ್ದು, ವಿಕೇಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ ಬೀಚ್‌ಗೆ ಭೇಟಿ ನೀಡಿವವರ ಸಂಖ್ಯೆ ಹೆಚ್ಚಿದ್ದು, ಈ ವೇಳೆ ಅಲ್ಲಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಹಾಗೂ 6 ನೇ ತರಗತಿಯ ವಿದ್ಯಾರ್ಥಿ, ಪಿಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು.

Check Also

ಮಣಿಪಾಲ: ಪರೀಕ್ಷೆಯಲ್ಲಿ ಅನುತ್ತೀರ್ಣ – ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: 10 ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.ಮೃತ ಬಾಲಕನನ್ನು ಕಾಪು …

Leave a Reply

Your email address will not be published. Required fields are marked *

You cannot copy content of this page.