October 16, 2024
WhatsApp Image 2023-01-03 at 4.40.17 PM

ವಿಜಯಪುರ : ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ವಿಜಯಪುರದ ಸೈನಿಕ ಶಾಲೆಯಲ್ಲಿ ಇಂದು ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಮಾತನಾಡಿದಂತ ಅವರು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಂತೆ ಬದುಕಿದವರು ಮತ್ತಾರೂ ಇಲ್ಲ.

ಎಲ್ಲರಿಗೂ ಮಾದರಿಯಾಗುವಂತ ನಡೆ ಅವರದ್ದಾಗಿದೆ. ಅವರು ಯಾವತ್ತೂ ಯಾವುದಕ್ಕೂ ಆಸೆ ಪಡಲಿಲ್ಲ ಎಂದರು. ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಸುವ ಕುರಿತು ಕ್ರಮ ವಹಿಸಲು ಸರ್ಕಾರ ಸಿದ್ದವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಿದ್ದೇಶ್ವರ ಶ್ರೀಗಳು ತಮ್ಮ ನಿಧನಾನಂತ್ರ ಯಾವುದೇ ಸ್ಮಾರಕವನ್ನು ನಿರ್ಮಿಸದಂತೆ ತಿಳಿಸಿದ್ದಾರೆ. ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರವನ್ನು ಮಾಡುವಂತೆ ಹೇಳಿದ್ದರು. ಹೀಗೆ ಮಾಡುವುದರಿಂದ ಅವರು ಈ ಗಾಳಿಯಲ್ಲಿ ಲೀನರಾಗಿ ಅದನ್ನು ಸೇವಿಸಿದಂತ ಎಲ್ಲರಲ್ಲಿಯೂ ಅವರಿರುತ್ತಾರೆ ಎಂದು ಹೇಳಿದರು.

ಸಿದ್ಧೇಶ್ವರ ಶ್ರೀಗಳು ನಿಧನ ನಂತ್ರ ಅಗ್ನಿಸ್ಪರ್ಷದ ಮೂಲಕ ಶವಸಂಸ್ಕಾರಕ್ಕೆ ಕೋರಿಕೊಂಡಿದ್ದಾರೆ. ಇದರ ಅರ್ಥ ಅವರು ಸಾವಿನ ನಂತ್ರವೂ ಈ ಪಂಚಭೂತಗಳಲ್ಲಿ ಲೀನರಾಗಿ, ಗಾಳಿಯಲ್ಲಿ ಸಿದ್ದೇಶ್ವರ ಶ್ರೀಗಳು ಇರಲಿದ್ದಾರೆ. ಸ್ವಾಮಿ ವಿವೇಕಾನಂದ ನಂತ್ರ, ನನ್ನ ಮೇಲೆ ಪ್ರಭಾವ ಬೀರಿದ್ದು ಸಿದ್ದೇಶ್ವರ ಶ್ರೀಗಳು ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸಿದ್ದೇಶ್ವರ ಶ್ರೀಗಳು ಅಂತ್ಯವಾಗಿಲ್ಲ. ಎಲ್ಲಿಯವರೆಗೆ ಈ ಭೂಮಂಡಲ, ನಿಸರ್ಗ, ಈ ಸೂರ್ಯ, ಚಂದ್ರರು ಇರುತ್ತಾರೋ ಅಲ್ಲಿಯವರೆಗೂ ಅವರು ಈ ಭಕ್ತಸಾಗರದ ಶರೀರದಲ್ಲಿ ಇರುತ್ತಾರೆ. ಅವರನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇರುತ್ತದೆ ಎಂದರು.

ಶ್ರೀಗಳು ಬಹಳ ದೊಡ್ಡ ಸಾಧಕರು. ಸ್ವಾಮಿ ವಿವೇಕಾನಂದ ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತ್ರವೂ ಅವರ ಸಾಧನೆಗಳಿರುತ್ತದೆ ಎನ್ನೋ ಹಾಗೇ, ಸಿದ್ದೇಶ್ವರ ಶ್ರೀಗಳು ಈ ಭಕ್ತ ಸಾಗರದ ಮಧ್ಯೆ ಇದ್ದಾರೆ. ವಿವೇಕಾನಂದರ ಬಳಿಕ, ನನ್ನ ಮೇಲೆ ಪ್ರಭಾವ ಬೀರಿದ್ದೇ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.

About The Author

Leave a Reply

Your email address will not be published. Required fields are marked *

You cannot copy content of this page.