March 10, 2026
WhatsApp Image 2023-01-01 at 5.56.03 PM

ಕಾರ್ಕಳ: ವೇಗವಾಗಿ ಸಾಗುತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಪಲ್ಟಿಯಾದ ಘಟನೆ ಹೆಬ್ರಿ ತಾಲೂಕಿನ ಅಂಡಾರು ಕರಿಯಾಲು ಕ್ರಾಸ್ ಬಳಿ ನಡೆದೆ.

ಜನವರಿ 1 ರಂದು ಭಾನುವಾರ ಮುಂಜಾನೆ ಈ ಅಪಘಾತ ನಡೆದಿದ್ದು, ಅಜೆಕಾರಿನ ವ್ಯಕ್ತಿಯೊಬ್ಬರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಿಂದ ಕೆರ್ವಾಶೆಯ ಮೂಲಕ ಅಜೆಕಾರಿಗೆ ಬರುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರಿಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಈ ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

About The Author

Leave a Reply

Your email address will not be published. Required fields are marked *

You cannot copy content of this page.