ಬಾಯಲ್ಲಿ ನೀರೂರಿಸುವ ‘ಕಾರ್ನ್ ಮ್ಯಾಗಿ’

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ.ಕಾರ್ನ್ ಮ್ಯಾಗಿಗೆ ಬೇಕಾಗುವ ಪದಾರ್ಥ

ಎರಡು ಪ್ಯಾಕೆಟ್ ಮ್ಯಾಗಿ

ಒಂದು ಈರುಳ್ಳಿ (ಸಣ್ಣಗೆ ಕತ್ತರಿಸಿದ)

ಕಾರ್ನ್ ಒಂದು ಸಣ್ಣ ಬೌಲ್

ಕ್ಯಾರೆಟ್ (ತೆಳುವಾದ ಉದ್ದಗೆ ಕಟ್ ಮಾಡಿದ್ದು)

ಕ್ಯಾಪ್ಸಿಕಮ್ (ಸಣ್ಣಗೆ ಕತ್ತರಿಸಿದ್ದು)

ಒಂದು ಟೊಮೆಟೊ (ಸಣ್ಣದಾಗಿ ಕತ್ತರಿಸಿದ)

ಎರಡು ಹಸಿರು ಮೆಣಸಿನಕಾಯಿಗಳು (ಸಣ್ಣಗೆ ಕತ್ತರಿಸಿದ)

ಉಪ್ಪು ರುಚಿಗೆ ತಕ್ಕಷ್ಟು

ನೀರು ಅಗತ್ಯಕ್ಕೆ ತಕ್ಕಷ್ಟು

ಕಾರ್ನ್ ಮ್ಯಾಗಿ ಮಾಡುವ ವಿಧಾನ

ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದಾಗ ಈರುಳ್ಳಿ, ಕ್ಯಾರೆಟ್, ಕಾರ್ನ್, ಟೊಮೆಟೊ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಮ್ಯಾಗಿ ಮಸಾಲೆಯನ್ನು ಹಾಕಿ. ತರಕಾರಿ ಬೇಯುತ್ತಿದ್ದಂತೆ ಮ್ಯಾಗಿ ಹಾಗೂ ಮ್ಯಾಗಿ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ಸೂಪ್ ನಂತೆ ಮ್ಯಾಗಿ ತಿನ್ನಲು ಬಯಸಿದ್ರೆ ಸ್ವಲ್ಪ ನೀರಿರುವಾಗ್ಲೇ ಗ್ಯಾಸ್ ಆರಿಸಿ.

Check Also

ಬಂಟ್ವಾಳ: ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ …

Leave a Reply

Your email address will not be published. Required fields are marked *

You cannot copy content of this page.