ಬೆಳ್ತಂಗಡಿ: ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಬೆಳ್ತಂಗಡಿ ಮಲೆಬೆಟ್ಟು ಬಳಿ ನಡೆದಿದೆ.
ಬೆಳ್ತಂಗಡಿ ಸುನ್ನತ್ ಕೆರೆ ನಿವಾಸಿ ಅಬ್ದುಲ್ ರಝಾಕ್ ಮೃತರು. ಹನೀಫ್ ಎಂಬವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್ ಎಂಬವರಿಗೆ ಸ್ವಲ್ಪ ಗಾಯಗಳಾಗಿದೆ.
ಮಲೆಬೆಟ್ಟು ಬಳಿ ಗುಜಿರಿ ಸಂಗ್ರಹಿಸಲು ತೆರಳುತ್ತಿದ್ದ ಗೂಡ್ಸ್ ರಿಕ್ಷಾ ಗೆ ಧರ್ಮಸ್ಥಳದ ಸ್ಕೂಲ್ ಬಸ್ ಅಜಾಗರೂಕತೆಯಿಂದ ವೇಗವಾಗಿ ಸಂಚರಿಸಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಝಾಕ್ ಅವರ ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.