ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ.
ದೇಶಾದ್ಯಂತ ಕೋವಿಡ್ ಭೀತಿ ಆವರಿಸಿದೆ. ಪೊಲೀಸ್ ಇಲಾಖೆಯಲ್ಲೂ ಆತಂಕ ಶುರುವಾಗಿದೆ. ಈ ನಡುವೆ ಹೊಸವರ್ಷ ಕೂಡ ಹತ್ತಿರವಾಗ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ರೂಲ್ಸ್ ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್ ಬರುವ ಪ್ರಯಾಣಿಕರಿಗೆ ಕೆಲವು ಮುನ್ನೆಚ್ಚರಿಕೆ ಮಾರ್ಗಸೂಚಿ ಕ್ರಮಗಳ ಬಿಡುಗಡೆ ಮಾಡಲಾಗಿದೆ.
ಕೋವಿಡ್ ಮಾರ್ಗಸೂಚಿ ಏನಿದೆ?
ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಶೇ. 2ರಷ್ಟು ಪ್ರಯಾಣಿಕರಿಗೆ ರ‍್ಯಾಂಡಮ್ ಕೋವಿಡ್ ಟೆಸ್ಟ್ ಮಾಡಲಾಗಿದೆ. ರೋಗ ಲಕ್ಷಣಗಳು ಕಂಡುಬರುವ ಪ್ರಯಾಣಿಕರು ತತ್‌ಕ್ಷಣ ಐಸೋಲೇಷನ್ ಆಗಬೇಕು. 12 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಅಲ್ಲ. ರೋಗ ಗುಣ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರು ಸ್ವಯಂ ನಿಗಾವಹಿಸಲು ಸೂಚಿಸಲಾಗಿದೆ.