
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ18ರಂದು ಮುಲ್ಕಿ ಜಂಕ್ಷನ್ ಸಮೀಪದ ಅಪೋಲೊ ಫಾರ್ಮಾ ಬಳಿ ನಿಲ್ಲಿಸಲಾಗಿದ್ದ ಹೋಂಡಾ ಯುನಿಕಾರ್ನ್ ಬೈಕ್ (ಕೆಎ 20 ಇಬಿ 6383) ಕಳ್ಳತನವಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ತಂಡವು ಆರೋಪಿಗಳಾದ ಮುಕ್ಕ ಸುರತ್ಕಲ್ ನಿವಾಸಿ ಮೊಹಮ್ಮದ್ ರಾಝಿಕ್(36) ಹಾಗೂ ಬೈಕಂಪಾಡಿ ನಿವಾಸಿ ಉಬೈದತ್ ಹೈದರ್(31) ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹20 ಸಾವಿರ ಮೌಲ್ಯದ ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು ₹18 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆರೋಪಿತರ ಮೇಲೆ ಈ ಕೆಳಗಿನಂತೆ ಪ್ರಕರಣ ದಾಖಲಾಗಿರುತ್ತದೆ:
ಮೊಹಮ್ಮದ್ ರಾಝಿಕ್ :1.ಸುರತ್ಕಲ್ ಠಾಣಾ ಅಕ್ರ ನಂಬ್ರ 98/2024 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ2.ಪಣಂಬೂರು ಠಾಣಾ ಅಕ್ರ ನಂಬ್ರ 88/2019 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ3.ಮುಲ್ಕಿ ಠಾಣಾ ಅಕ್ರ ನಂಬ್ರ 110/2023 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ.
ಉಬೈದತ್ ಹೈದರ್ :1.ಪಣಂಬೂರು ಪೊಲೀಸ್ ಠಾಣಾ ಅಕ್ರ ನಂಬ್ರ. 03/2002 ಕಲಂ: 143, 147, 148, 341, 323, 324, 504, 506 ಜೊತೆಗೆ 149 ಐಪಿಸಿ2.ಪಣಂಬೂರು ಪೊಲೀಸ್ ಠಾಣಾ ಅಕ್ರ ನಂಬ್ರ 42/2014 ಕಲಂ :148, 341, 323, 324, 504, 506 ಜೊತೆಗೆ 149 ಐಪಿಸಿ 3.ಪಣಂಬೂರು ಪೊಲೀಸ್ ಠಾಣಾ ಅ ಕ್ರ ನಂಬ್ರ 42/2014 ಕಲಂ:143, 147, 341, 323, 427, 506 ಜೊತೆಗೆ 149 ಐಪಿಸಿ4.ಪಣಂಬೂರು ಪೊಲೀಸ್ ಠಾಣಾ ಅ ಕ್ರ ನಂಬ್ರ 140/2014 ಕಲಂ:45/2016 143, 147, 341, 323, 324, 504, 506 ಜೊತೆಗೆ 149 ಐಪಿಸಿ.
