May 26, 2026
AA-260526-vp

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್‌ಗೂ ದಿನಾಂಕ ಪ್ರಕಟಗೊಂಡಿದ್ದು, ಜೂನ್ 18ರಂದು ಚುನಾವಣೆ ನಡೆಯಲಿದೆ.

ಜೂನ್ 26ರಂದು ತೆರವಾಗಲಿರುವ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು. ಕಾಂಗ್ರೆಸ್‌ನ 3, ಬಿಜೆಪಿಯ 3 ಮತ್ತು ಜೆಡಿಎಸ್‌ನ ಒಂದು ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ.

ಜೂನ್ 08 ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕವಾಗಿದ್ದು, ಜೂನ್ 09 ಎಂದು ನಾಮಪತ್ರ ಪರಿಶೀಲನೆ, ಜೂನ್ 11 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಜೂನ್ 18 ರಂದು ಮತದಾನ ನಡೆಯಲಿದ್ದು, ಅದೇ ದಿನ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

About The Author

Leave a Reply

Your email address will not be published. Required fields are marked *

You cannot copy content of this page.