May 18, 2026
image - 2026-05-18T112015.245

ಅಹಮದಾಬಾದ್: ಪಾನಿಪುರಿ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅಚ್ಚುಮೆಚ್ಚು. ಆದರೆ ಅಹಮದಾಬಾದ್‌ನ ರಾಣಿಪ್ ಪ್ರದೇಶದಲ್ಲಿ ಪಾನಿಪುರಿ ತಿನ್ನುತ್ತಿದ್ದ ಯುವತಿಯೊಬ್ಬಳಿಗೆ ಪಾನಿಪುರಿಯೊಳಗೆ ಮೂಳೆ ಪತ್ತೆಯಾಗಿದೆ.

ಪಾನಿಪುರಿಯಲ್ಲಿ ಮೂಳೆ ಕಂಡ ಯುವತಿಗೆ ಶಾಕ್ ಆಗಿದ್ದು, ಅಂಗಡಿ ಮಾಲೀಕನನ್ನು ಪ್ರಶ್ನಿಸಿದ್ದಾಳೆ. ಅಂಗಡಿಯವನು ಅದು ಮೂಳೆಯಲ್ಲ ಮರದ ತುಂಡು ಎಂದು ವಾದಿಸಿದ್ದಾನೆ. ಕೊನೆಗೆ ಮಾಲೀಕನನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮೂಳೆ ಎಂದು ಒಪ್ಪಿಕೊಂಡು ಯುವತಿ ಬಳಿ ಕ್ಷಮೆಯಾಚಿಸಿದ್ದಾನೆ.

ಈ ಘಟನೆಯನ್ನು ಯುವತಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೀದಿ ಆಹಾರದ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.