
ಮಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಮಂಗಳೂರಿನಲ್ಲಿ ಶನಿವಾರ ನಡೆದಿದೆ. ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ನೌಫಾಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ.
ಲಿಪ್ಟ್ ಗೆ ಸಾಮಾಗ್ರಿಗಳನ್ನು ತುಂಬಿ ಕೆಳಕ್ಕೆ ತೆರಳುವ ವೇಳೆ ಲಿಪ್ಟ್ ಏಕಾಏಕಿ ಮಧ್ಯೆ ನಿಂತಿದೆ. ಈ ವೇಳೆ ಸಹದ್ಯೋಗಿಗಳನ್ನು ಲಿಪ್ಟ್ ನ ಬಾಗಿಲನ್ನು ತೆರೆದು ಆತನನ್ನು ಹೊರಗೆ ತೆಗೆಯಲು ಪ್ರಯತ್ನಿಸುವ ವೇಳೆ ಲಿಪ್ಟ್ ಏಕಾಏಕಿ ಕೆಳಕ್ಕೆ ತೆರಳಿದ್ದು, ಇ ವೇಳೆ ನೌಫಾಲ್ ಲಿಪ್ಟ್ ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.
ಮೃತ ನೌಫಾಲ್ ಅವಿವಾಹಿತ ಎಂದು ತಿಳಿದುಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಿಸಿಟಿವಿ ಇದೀಗ ವೈರಲ್ ಆಗಿದೆ.
