
ಬೆಂಗಳೂರು: ಕಳೆದ ಕೆಲ ದಿನಗಳಿಂದ ಸತತವಾಗಿ ಕುಸಿತ ಹಂಡಿದ್ದ ಚಿನ್ನದ ದರ ಇದೀಗ ಭರ್ಜರಿ ಏರಿಕೆ ಕಾಣುವುದರೊಂದಿಗೆ ಆಭರಣ ಪ್ರಿಯರಿಗೆ ಶಾಕ್ ಉಂಟಾಗಿದೆ.
ಇಂದು ಚಿನ್ನದ ದರ ಪ್ರತಿ ಗ್ರಾಮ್‌ಗೆ 170 ರೂ. ಏರಿಕೆ ಕಂಡಿದೆ. ಜೊತೆಗೆ ಬೆಳ್ಳಿ ಬೆಲೆ ಗ್ರಾಮ್‌ಗೆ 15 ರೂ. ಹೆಚ್ಚಳವಾಗಿದೆ. ಇನ್ನು ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆಯಾಗಿದೆ.
24 ಕ್ಯಾರಟ್‌ನ ಅಪರಂಜಿ ಚಿನ್ನ 10 ಗ್ರಾಮ್‌ಗೆ 1,53,980 ರೂ., 1 ಗ್ರಾಮ್‌ಗೆ 15,398 ರೂ. ತಲುಪಿದೆ. 22 ಕ್ಯಾರೆಟ್‌ನ ಚಿನ್ನ 10 ಗ್ರಾಮ್‌ಗೆ 1,41,150 ರೂ., 1 ಗ್ರಾಮ್‌ಗೆ 14,115 ರೂ. ತಲುಪಿದೆ. ಇನ್ನು ಬೆಳ್ಳಿ ಗ್ರಾಮ್‌ಗೆ 300 ರೂ. ಗೆ ಏರಿಕೆಯಾಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 29,000 ರೂ. ತಲುಪಿದ್ದು.
