March 20, 2026
WhatsApp Image 2026-01-22 at 9.34.23 AM

ಬಿಗ್‌ಬಾಸ್‌ ಕನ್ನಡ ರನ್ನರ್‌ ಅಪ್‌ ಆಗಿರುವ ರಕ್ಷಿತಾ ಶೆಟ್ಟಿ ಅವರಿಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೆರವಣಿಗೆ ಸಂದರ್ಭದಲ್ಲಿ ಕೈಯಲ್ಲಿ ಬಂಗುಡೆ ಮೀನು ಹಿಡಿದು ರಕ್ಷಿತಾ ಶೆಟ್ಟಿ ಸಂಭ್ರಮಿಸಿದ್ದಾರೆ.

ಹೆಜಮಾಡಿ ಟೋಲ್‌ನಿಂದ ಪಡುಬಿದ್ರೆಯವರೆಗೆ  ರಕ್ಷಿತಾ ಶೆಟ್ಟಿ ಅವರನ್ನು ಮೆರವಣಿಗೆಯೊಂದಿಗೆ ಕರೆ ತಂದರು. ತೆರೆದ ವಾಹನ ಏರಿದ ರಕ್ಷಿತಾ ಅವರು ಅಭಿಮಾನಿಗಳಿಗೆ ಕೈ ಬೀಸಿದರು.ರಕ್ಷಿತಾ ಬರುವ ವಿಚಾರ ತಿಳಿದು ನೂರಾರು ಜನ ಹೆಜಮಾಡಿ ಟೋಲ್‌ನಲ್ಲಿ ಸೇರಿದ್ದರು. ನಂತರ ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕಿದರು.

ತುಳುನಾಡಿನ ಹುಡುಗಿ ರಕ್ಷಿತಾ ಬಿಗ್‌ ಬಾಸ್‌ ಮನೆಗೆ ಒಂದು ವಾರದ ಬಳಿಕ ಎಂಟ್ರಿ ಕೊಟ್ಟವರು. ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್‌ ರೂಮ್‌ಗೆ ಕಳುಹಿಸಿದ್ದರು ಬಿಗ್‌ ಬಾಸ್‌. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್‌ ಮಾಡಿಸಲಾಗಿತ್ತು. ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು! ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್‌ ಬಿಗ್‌ ಬಾಸ್‌ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಆದರೂ ಛಲ ಬಿಡದ ರಕ್ಷಿತಾ ಅಲ್ಲಿಯೂ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.