
ಶೀರೂರು ಪರ್ಯಾಯದ ಅದ್ದೂರಿ ಶೋಭಾಯಾತ್ರೆಯು ಜ.18ರ ಮುಂಜಾನೆ 5.30ರ ಸುಮಾರಿಗೆ ಸಂಪನ್ನಗೊಂಡಿತು.
ಕಾಪು ದಂಡತೀರ್ಥ ದಲ್ಲಿ ಸ್ನಾನ ಮುಗಿಸಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಾತ್ರಿ 2.30ರ ಸುಮಾರಿಗೆ ಪರ್ಯಾಯ ಶೀರೂರು ವೇದವರ್ಧನ ಶ್ರೀಗಳು ಜೋಡುಕಟ್ಟೆಗೆ ಆಗಮಿಸಿದರು. ಅಲ್ಲಿಂದ ಮೆರವಣಿಗೆ ಆರಂಭಗೊಂಡು ಕೋರ್ಟ್ ರಸ್ತೆ, ಹಳೆ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು. ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಗಳ ಯತಿಗಳು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು.ಪರ್ಯಾಯ ಮೆರವಣಿಗೆಯನ್ನು ನೋಡಲು ರಸ್ತೆಯ ಇಕ್ಕೆಲಾಗಳಲ್ಲಿ ಜನಸ್ತೋಮ ಹರಿದುಬಂದಿತ್ತು.
