
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಾಲು ಪುರುಷರಬೆಟ್ಟುವಿನ ಯುವಕನೋರ್ವನ ಶವ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಪುರುಷರಬೆಟ್ಟು ನಿವಾಸಿ ರಾಜೇಶ್. ಪಿ(30) ಮೃತ ಯುವಕ. ಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಟ ರಾಜೇಶ್ ವಾಪಾಸು ಹಿಂದಿರುಗದೆ ನಾಪತ್ತೆಯಾಗಿದ್ದರು.
ಅವರ ಪತ್ತೆಗಾಗಿ ಮನೆಯವರು ಹಾಗೂ ಸ್ಥಳೀಯವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ, ಹುಡುಕಾಟ ನಡೆಸಿದಾಗ ಇಂದು ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
