
ಶಕ್ತಿನಗರದ ರಮಾ ಶಕ್ತಿ ಮಿಷನ್‌ನಲ್ಲಿ ಡಿಸೆಂಬರ್ 10, 2025ರಂದು ದಿವ್ಯ ಮಾತೆ ಶ್ರೀ ರಮಾದೇವಿ ಮತ್ತು ಶ್ರೀ ಕೃಷ್ಣ ಭಗವಾನ್ ಅವರ 100ನೇ ವಿವಾಹ ವಾರ್ಷಿಕೋತ್ಸವವನ್ನು ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಈ ವಿಶೇಷ ದಿನದ ಅಂಗವಾಗಿ ದೇವಿ ಶ್ರೀ ರಮಾಂಬಿಕಾ ಉತ್ಸವಮೂರ್ತಿಗೆ ಪಂಚಾಮೃತ ಅಭಿಷೇಕ ವೈಭವದಿಂದ ನೆರವೇರಿತು.
ಇದರೊಂದಿಗೆ ಡಿಸೆಂಬರ್ 25–29ರ ನಡುವೆ ನಡೆಯಲಿರುವ ಸಹಸ್ರ ಚಂಡಿಕಾ ಯಾಗದ ಸಿದ್ಧತೆಗಳು ಪ್ರಯುಕ್ತ – ಸ್ಥಳೀಯ ಭಕ್ತರು, ನೆರೆಹೊರೆಯ ಕುಟುಂಬಗಳು, ಯುವಕರು ಹಾಗೂ ಸೇವಾದಳದ ಸದಸ್ಯರು ಸ್ವಯಂಪ್ರೇರಿತವಾಗಿ ಯಾಗದ ವ್ಯವಸ್ಥೆಗಳಲ್ಲಿ ತೊಡಗಿದ್ದು, ರಮಾ ಶಕ್ತಿ ಮಿಷನ್ ಸುತ್ತಮುತ್ತ ಸೇವಾಭಾವದ ಚಟುವಟಿಕೆಗಳು ಉತ್ಸಾಹಭರಿತವಾಗಿ ನಡೆಯುತ್ತಿದೆ.
ಯಾಗಕ್ಕಾಗಿ ಅಗತ್ಯವಿರುವ ಹೊರೆಕಾಣಿಕೆ ಸಂಗ್ರಹಕ್ಕಾಗಿ ಸುತ್ತಮುತ್ತಲಿನ ಮಂದಿರಗಳು, ಸಂಘ-ಸಂಸ್ಥೆಗಳು ಮತ್ತು ಭಕ್ತರು ತಮ್ಮಿಂದಾದ ಸಹಕಾರ ನೀಡುವಂತೆ ರಮಾ ಶಕ್ತಿ ಮಿಷನ್ ಮನವಿ ಮಾಡಿದೆ. ಹೊರೆಕಾಣಿಕೆ, ಸೇವೆ ಮತ್ತು ಧಾರ್ಮಿಕ ಕೊಡುಗೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ವಿಶೇಷ ಹೋರೇಖಾಣಿಕೆ ಮೆರವಣಿಗೆ ಆಯೋಜಿಸಲಾಗಿದೆ.ಈ ಮಹಾಯಾಗದ ಹೋರೇಖಾಣಿಕೆ ಮೆರವಣಿಗೆಯಲ್ಲಿ ಭಕ್ತರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಡಿಸೆಂಬರ್ 29ರಂದು ನಡೆಯುವ ಮಹಾಯಾಗದ ಪೂರ್ಣಾಹುತಿ, ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳವರ ಉಪಸ್ಥಿತಿಯಲ್ಲಿ ವೈಭವದಿಂದ ನೆರವೇರಲಿದೆ. ಈ ದಿವ್ಯ ಸಹಸ್ರ ಚಂಡಿಕಾ ಯಾಗದಲ್ಲಿ ಎಲ್ಲರೂ ಕುಟುಂಬ ಸಮೇತ ಭಾಗವಹಿಸಿ, ದೇವಿಯ ಕೃಪೆ ಮತ್ತು ಆಶೀರ್ವಾದಗಳನ್ನು ಪಡೆಯುವಂತೆ ರಮಾ ಶಕ್ತಿ ಮಿಷನ್ ಹೃತ್ಪೂರ್ವಕ ಆತ್ಮೀಯ ಆಹ್ವಾನ ನೀಡುತ್ತದೆ.
