December 5, 2025
WhatsApp Image 2025-11-29 at 3.34.27 PM

ಮಂಗಳೂರು : ಮಂಗಳೂರಿನ ಸ್ವರ್ಣ ಜುವೆಲರ್ಸ್ ಅಂಗಡಿಗೆ ಗ್ರಾಹಕರಂತೆ ಭೇಟಿ ನೀಡಿ, ತನ್ನ ಹೆಸರನ್ನು ಬದಲಿಸಿ 31 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕಿಟ್‌ಗಳನ್ನು ಮೂಲಕ ಪಡೆದು ಪರಾರಿಯಾಗಿದ್ದ ಅಂತರ್‌ರಾಜ್ಯ ವಂಚನೆ ಆರೋಪಿಯನ್ನು ಉರ್ವಾ ಪೊಲೀಸರು ಕೊಯಂಬತ್ತೂರಿನ ಪುಲಿಯಕುಲಂ ಎಂಬಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ 240 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬಿಸ್ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡು ಕೊಯಂಬತ್ತೂರಿನ ಸಿಂಗನಲ್ಲೂರಿನಲ್ಲಿ ಪದ್ಮ ಕಿರಣ್ ಎನ್‌ಕ್ಲೇವ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಪುಗಲ್ ವಾಸನ್ @ ಪುಗಲ್ ಹಸನ್ @ ಅರುಣ್ (50) ಬಂಧಿತ ಆರೋಪಿ. ಘಟನೆಯ ವಿವರ: 21-11-2025ರಂದು ಸಂಜೆ, ಉರ್ವಾಸ್ಟೋರ್–ಚಿಲಿಂಬಿ ಪ್ರದೇಶದ ಗುಜ್ಜಾಡಿ ಚೆಂಬರ್‌ಸ್‌ನಲ್ಲಿರುವ ಸ್ವರ್ಣ ಜುವೆಲರ್ಸ್ ಗೆ ಬಂದಿದ್ದ ‘ಅರುಣ್’ ಎಂಬ ನಕಲಿ ಹೆಸರಿನಲ್ಲಿ ಬಂದಿದ್ದ ವ್ಯಕ್ತಿ, ಬಿಜೈ–ಕಾಫಿಕಾಡ್‌ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್‌ನಲ್ಲಿ ತಾನು ಹೊಸದಾಗಿ ಕಚೇರಿ ತೆರೆಯುತ್ತಿರುವುದಾಗಿ ಅಂಗಡಿ ಮಾಲಕರಿಗೆ ಪರಿಚಯ ಮಾಡಿಕೊಂಡಿದ್ದ. ಅಲ್ಲಿಗೆ ಬರುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದಕ್ಕಾಗಿ ತಲಾ 10 ಗ್ರಾಂ ತೂಕದ 24 ಚಿನ್ನದ ಬಿಸ್ಕಿಟ್‌ಗಳು ಬೇಕೆಂದು ಹೇಳಿ, ಅವುಗಳ ವಿನ್ಯಾಸ ಆಯ್ಕೆ ಮಾಡಿಕೊಂಡಿದ್ದಾನೆ. 22-11-2025 ಮಧ್ಯಾಹ್ನ 12 ಗಂಟೆಗೆ ಅಜಂತ್ ಬಿಸಿನೆಸ್ ಸೆಂಟರ್‌ಗೆ ಚಿನ್ನವನ್ನು ತಂದುಕೊಡಲು ಹೇಳಿ, ಚಿನ್ನ ಸಿಕ್ಕ ಕೂಡಲೇ RTGS ಮೂಲಕ ಹಣ ಪಾವತಿಸುವುದಾಗಿ ನಂಬಿಸಿದ್ದಾನೆ.

22-11-2025ರಂದು ಜ್ಯುವೆಲ್ಲಸರ್ಸ್‌ನವರು ಚಿನ್ನವನ್ನು ಒಯ್ಯುತ್ತಿದ್ದಾಗ, ಆರೋಪಿಯು ಅವರನ್ನು ಕಟ್ಟಡದ 5ನೇ ಮಹಡಿಯ ಕೆಫೆಟೇರಿಯಾಕ್ಕೆ ಕರೆದುಕೊಂಡು ಹೋಗಿ 24 ಬಿಸ್ಕಿಟ್‌ಗಳನ್ನು ಸ್ವೀಕರಿಸಿದ್ದಾನೆ. ನಂತರ “3ನೇ ಮಹಡಿಯಲ್ಲಿರುವ ನನ್ನ ಕಚೇರಿಯಲ್ಲಿ RTGS ಮಾಡುತ್ತೇನೆ” ಎಂದು ಹೇಳಿ, ಹಣ ಪಾವತಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಅಂಗಡಿಯ ಮಾಲಕ ಅಜಯ್ ರಾಮದಾಸ್ ನಾಯಕ್ ಅವರು ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು 26-11-2025ರಂದು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪುಲಿಯಕುಲಂ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯಿಂದ, ಈತನು ದೇಶದ ವಿವಿಧ ರಾಜ್ಯಗಳಲ್ಲಿ ನಕಲಿ ಹೆಸರುಗಳನ್ನು ಬಳಸಿಕೊಂಡು ಇದೇ ರೀತಿಯ ವಂಚನೆ ಮಾಡಿರುವುದು ಬಹಿರಂಗವಾಗಿದೆ. ಮುಂಬೈ (ಮಹಾರಾಷ್ಟ್ರ), ಹೈದರಾಬಾದ್ (ತೆಲಂಗಾಣ), ಚಿತ್ತೋಡ್ (ತಮಿಳುನಾಡು), ತಿರುಪತಿ (ಆಂಧ್ರಪ್ರದೇಶ)ಗಳಲ್ಲಿ ಸಹ ಇದೇ ಮಾದರಿಯ ವಂಚನೆ ಪ್ರಕರಣಗಳು ದಾಖಲಾಗಿವೆ. ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ (ಐಪಿಎಎಸ್) ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ಆಯುಕ್ತ ಮಿಥುನ್ ಎಚ್.ಎನ್ (ಕಾ&ಸು) ಮತ್ತು *ರವಿಶಂಕರ್ (ಅಪರಾಧ) ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತೋರಟ್ ವಹಿಸಿಕೊಂಡಿದ್ದರು. ತಂಡದಲ್ಲಿ ಉರ್ವಾ ಠಾಣೆಯ ಪಿಐ ಶ್ಯಾಮ್ ಸುಂದರ್ ಹೆಚ್.ಎಮ್, ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಎಲ್. ಮಂಜುಳಾ, ಎಎಸ್‌ಐ ವಿನಯ್ ಕುಮಾರ್ ಮತ್ತು ಸಿಬ್ಬಂದಿ ಅನಿಲ್, ಭಾಸ್ಕರ್, ಹರೀಶ್, ವೆಂಕಟೇಶ್, ಚಂದ್ರಹಾಸ, ಯೆಲ್ಲಾಲಿಂಗ ಇದ್ದರು.

About The Author

Leave a Reply

Your email address will not be published. Required fields are marked *

You cannot copy content of this page.