
ಸೈಯಿಪುದ್ದಿನ್ ಪ್ರಾಯ 52 ವರ್ಷ, ಇವರು ಖಾಸಗಿ ಬಸ್ಸು ವ್ಯವಹಾರ ನಡೆಸಿಕೊಂಡಿದ್ದು, ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾದ ಫೈಜಲ್ ಖಾನ್ ಮತ್ತು ಉಡುಪಿ ದೊಡ್ಡಣಗುಡ್ಡೆ ನಿವಾಸಿ ಶರೀಪ್ ಇವರು ಸೈಯಿಪುದ್ದಿನ್ ರವರ ಸ್ನೇಹಿತರಾಗಿದ್ದು, ಈ ದಿನ ದಿನಾಂಕ: 27/09/2025 ರಂದು ಬೆಳಿಗ್ಗೆ ಫೈಜಲ್ ಖಾನ್ ನು ಅವರ ಮನೆಗೆ ಬಂದು ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿ, ಫೈಜಲ್ ಖಾನ್ ನೊಂದಿಗೆ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಮನೆಯ ಬಳಿಯಿಂದ ಅವರ ಕಾರಿನಲ್ಲಿ ಹೋಗಿದ್ದು, ಅವರ ಸ್ನೇಹಿತನಾದ ಫೈಜಲ್ ಖಾನ್ ಮತ್ತು ಶರೀಫ್ ರವರು ಇತರರೊಂದಿಗೆ ಸೇರಿಕೊಂಡು ಯಾವುದೋ ಕಾರಣದಿಂದ ದ್ವೇಷಗೊಂಡು ಸೈಯಿಪುದ್ದಿನ್ (52) ಇವರನ್ನು ಕೊಲ್ಲುವ ಉದ್ದೇಶದಿಂದ ಮಲ್ಪೆಗೆ ಕರೆದುಕೊಂಡು ಬಂದು ಬೆಳಿಗ್ಗೆ 10:15 ಗಂಟೆಯಿಂದ ಬೆಳಿಗ್ಗೆ 11:30 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಕೊಡವೂರು ಗ್ರಾಮದ ನಾಗಬನದ ಬಳಿ ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ, ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಸೈಯಿಪುದ್ದಿನ್ ಮಗ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 108/2025 ಕಲಂ : 103 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯ ಬಗ್ಗೆ ಮೂರು ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿರುತ್ತದೆ.
ಮೃತ ಸೈಯಿಪುದ್ದಿನ್ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.
