
ಕಾರ್ಕಳ : ಕಾರ್ಕಳ ಹಿರ್ಗಾನದ ಉದ್ಯಮಿ, ಕಂಟ್ರಾಕ್ಟರ್, ಹಿರ್ಗಾನ ಲಕ್ಷ್ಮಿಪುರ ಆಧಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮುಕ್ತೆಸರ ಅಶೋಕ್ ನಾಯಕ್ ಎಂಬವರು ಹಿರ್ಗಾನದ ಯಶವಂತ ನಾಯಕ್ ಎಂಬವರ ಮೇಲೆ ಕ್ಸುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿ ಜೀವನ ಬೆದರಿಕೆ ಹಾಕಿದ ಘಟನೆ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿರುವ ದುರ್ಗಾ ವೆಜೆಟೇಬಲ್ ಅಂಗಡಿ ಬಳಿ ತನ್ನ ಸ್ನೇಹಿತರಾದ ಶಂಕರ ನಾಯಕ್, ದಿನೇಶ್ ನಾಯಕ್ ಮತ್ತು ಸತೀಶ ಶೆಟ್ಟಿ ಎಂಬವರೊಂದಿಗೆ ಮಾತನಾಡುತ್ತಿರುವಾಗ, ಯಶವಂತ್ ನಾಯಕ್ ಎಂಬವರಿಗೆ ಅಪಾದಿತರಾದ ಅಶೋಕ್ ನಾಯಕ್ ಎಂಬವರು ಎಕಾಏಕಿಯಾಗಿ ಬಂದು ನನ್ನ ಮೇಲೆ ವಾಟ್ಸಪ್ಪ್ ನಲ್ಲಿ ಮಾನಹಾನಿ ಪೋಸ್ಟ್ ಹಾಕುತಿಯ ನಿನಗೆ ನಿನ್ನನ್ನು ನೋಡಿಕೊಳ್ಳುತೇನೆ ಎಂದು ಗದರಿಸಿ ಪಿರ್ಯಾದಿದಾರರ ಕೆನ್ನೆಗೆ ಹೊಡೆದು, ಜೀವಬೆದರಿಕೆ ಹಾಕಿರುವುದಾಗಿ ಯಶವಂತ್ ನಾಯಕ್ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತಾರೆ
