March 20, 2026
WhatsApp Image 2025-09-19 at 9.41.28 AM

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಮೆಂಟ್ ಮಾಡಿದ ಪ್ರಕರಣವೊಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸೆಪ್ಟೆಂಬರ್ 18, 2025 ರಂದು ಬಂಟ್ವಾಳ ತಾಲೂಕು ನಿವಾಸಿ ಅಬ್ದುಲ್ ರಹಿಮಾನ್ (36) ಅವರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ವೀಕ್ಷಿಸುತ್ತಿದ್ದಾಗ Vartha Bharati ಪೇಜ್‌ನಲ್ಲಿ ಹಾಕಿದ್ದ ನ್ಯೂಸ್ ರೀತಿಯ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿರುವುದನ್ನು ಗಮನಿಸಿದ್ದಾರೆ.

ಈ ವೇಳೆ ಸನಾತನಿ ಸಿಂಹ ಎಂಬ ಫೇಸ್‌ಬುಕ್ ಪೇಜ್‌ನಿಂದ ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ರೀತಿಯ ಕಾಮೆಂಟ್ ಹಾಕಿರುವುದು ಕಂಡುಬಂದಿದೆ.ಈ ಕುರಿತು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025, ಕಲಂ 353(2) BNS 202303 ರಂತೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.