March 19, 2026
wmremove-transformed (2)

ಬ್ರಹ್ಮಾವರ: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಬ್ರಹ್ಮಾವರದ ಹಿಲಿಯಾಣ ಗ್ರಾಮದ ಆಮ್ರಕಲ್ಲು ಎಂಬಲ್ಲಿ ನಡೆದಿದೆ.

ಅಮ್ರಕಲ್ಲು ನಿವಾಸಿ, ನಾರಾಯಣ ನಾಯ್ಕ (43) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 70 ಟೆಟ್ರಾ ಪ್ಯಾಕೆಟ್‌ ಮೈಸೂರ್‌ ಲ್ಯಾನ್ಸರ್‌ ಮದ್ಯ ಮತ್ತು ನಗದು 430 ರೂಪಾಯಿ ಸಹಿತ ಒಟ್ಟು 3,930 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.