
ಪಡುಬಿದ್ರಿ: ಗದ್ದೆ ಬದಿಗೆ ಹೋಗಿಬರುವುದಾಗಿ ತಿಳಿಸಿ ತೆರಳಿದ ವೃದ್ಧರೋರ್ವರು ಮನೆಗೆ ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಅವರ ಪುತ್ರ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾಪತ್ತೆಯಾದ ವೃದ್ಧನನ್ನು ಎಲ್ಲೂರು ಗ್ರಾಮದ ಸದಾಶಿವ (76) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಉಪಹಾರ ಮುಗಿಸಿ ಗದ್ದೆ ಬದಿಗೆ ಹೋಗಿದ್ದ ಸದಾಶಿವ ಅವರು ಅಪರಾಹ್ನ 2:30 ಆದರೂ ಮರಳದೇ ಇದ್ದಾಗ ತಾಯಿ ತನಗೆ ದೂರವಾಣಿ ಮೂಲಕ ತಿಳಿಸಿದ್ದು, ತಾನು ಬಂದು ಗದ್ದೆ ಸುತ್ತಮುತ್ತ, ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
