December 5, 2025
WhatsApp Image 2025-09-06 at 9.58.16 AM

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಗಂಭೀರ ಆರೋಪಗಳಿಗೆ ಸೆಂಥಿಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು, “ಧರ್ಮಸ್ಥಳ ಪ್ರಕರಣದ ಸಂಚು ರೂಪಿಸಿರುವ ಪ್ರಮುಖ ಮಾಸ್ಟರ್‌ಮೈಂಡ್ ಸಸಿಕಾಂತ್ ಸೆಂಥಿಲ್” ಎಂದು ಆರೋಪಿಸಿದ್ದರು.

“ಇದು ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ. ಯಾವುದೇ ಆಧಾರವಿಲ್ಲದ ಸುಳ್ಳು ಆರೋಪಗಳ ವಿರುದ್ಧ ನಾನು ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದೇನೆ” ಎಂದು ಸೆಂಥಿಲ್ ಅವರು ಹೇಳಿದ್ದಾರೆ.

“ನಾನು ಕರ್ನಾಟಕದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಮಂಗಳೂರು ಸೇರಿ ಹಲವೆಡೆ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಜನರು ನೋಡಿದ್ದಾರೆ. ಆದರೆ ಈಗ ಸುಳ್ಳು ಕಥೆಗಳನ್ನು ರಚಿಸಿ ಜನರ ಮನಸ್ಸುಗಳನ್ನು ತಿರುಗಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸಂಪೂರ್ಣ ಕೋಆರ್ಡಿನೇಟೆಡ್ ಪ್ರಪಗಾಂಡಾ”, ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಕರ್ನಾಟಕದ ಸಂಪತ್ತನ್ನು ಲೂಟಿ ಹೊಡೆದ ವ್ಯಕ್ತಿ, 2011ರ ಲೋಕಾಯುಕ್ತ ವರದಿಯಲ್ಲಿ ಮೈನಿಂಗ್ ಮಾಫಿಯಾ ಎಂದು ಉಲ್ಲೇಖಿಸಲ್ಪಟ್ಟ ವ್ಯಕ್ತಿ, 500 ಕೋಟಿ ರೂಪಾಯಿ ವೆಚ್ಚದ ಮದುವೆ ಮಾಡಿದ ವ್ಯಕ್ತಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ಎಸಿ ಆಗಿ ಎಂಟ್ರಿ ಕೊಟ್ಟ ದಿನವೇ ಅವರ ಬಂಧನವಾಗಿತ್ತು. ಅದೇ ನಾನು ಅವರನ್ನು ಕೊನೆಯ ಬಾರಿಗೆ ನೋಡಿದ್ದು. ಅವರ ವಿರುದ್ಧದ ತನಿಖೆಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಅದನ್ನೇ ವೈಯಕ್ತಿಕವಾಗಿ ನೆನಪಿಟ್ಟುಕೊಂಡಿರುವಂತೆ ಕಾಣುತ್ತಿದೆ. ಅವರ ಮಾತುಗಳಿಗೆ ಬೆಲೆ ಕೊಡಬೇಕೇ? ಇದು ಜನರನ್ನು ತಪ್ಪು ದಾರಿಗೆಳೆದು ರಾಜಕೀಯ ಲಾಭ ಪಡೆಯುವ ಪ್ರಯತ್ನ”, ಎಂದು ಸೆಂಥಿಲ್ ಹೇಳಿದ್ದಾರೆ.

ಜನರಿಗೆ ನಿಜಾಂಶ ಗೊತ್ತಾಗಬೇಕು. ಇಲ್ಲದಿದ್ದರೆ ಹೀಗೆ ಬಿಟ್ಟರೆ ಇವರು ಸುಳ್ಳಿನ ಮೇಲೆ ಸ್ಟೋರಿ ಮಾಡ್ತಾರೆ, ಸ್ಟೋರಿ ಮೇಲೆ ಸೀರಿಯಲ್ ಮಾಡ್ತಾರೆ, ಸೀರಿಯಲ್ ಅನ್ನು ಮೂವಿ ಮಾಡ್ತಾರೆ, ಮೂವಿಯನ್ನು ಆಸ್ಕರ್ ಗೆ ತೆಗೆದುಕೊಂಡು ಹೋಗ್ತಾರೆ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಅವರು ತಿರುಗೇಟು ನೀಡಿದ್ದಾರೆ.

“ಯಾವ ಧರ್ಮಕ್ಕೂ ನನ್ನ ವಿರೋಧವಿಲ್ಲ. ಆದರೆ ಧರ್ಮವನ್ನು ರಾಜಕೀಯಕ್ಕಾಗಿ ಬಳಸುವುದು, ಜನರನ್ನು ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿ ಕಟ್ಟಿ ಮಾಡುವ ಕೆಲಸ ನನಗೆ ಒಪ್ಪಲಾರದ ರಾಜಕೀಯ. ಇದು ಸಮಾಜವನ್ನು ವಿಭಜಿಸುವ ಅಪಾಯಕಾರಿ ಪ್ರಕ್ರಿಯೆ”, ಎಂದು ಸೆಂಥಿಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

“ಸಸಿಕಾಂತ್ ಸೆಂಥಿಲ್ ಅವರಿಗೆ ಎಸ್ಐಟಿ ನೋಟಿಸ್” ಸುದ್ದಿಗಳಿಗೆ ಸೆಂಥಿಲ್ ಪ್ರತಿಕ್ರಿಯಿಸಿದ ಅವರು,“ಇಂತಹ ಯಾವುದೇ ನೋಟಿಸ್ ನನ್ನ ಕೈಗೆ ಬಂದಿಲ್ಲ. ಪ್ರತಿದಿನ ಹೊಸ ಸ್ಕ್ರಿಪ್ಟ್ ಬರೆಯುತ್ತಿರುವವರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ನಾನು ಸುಮ್ಮನೆ ಕುಳಿತರೆ, ನಾಳೆ ಈ ಸುಳ್ಳುಗಳು ಸತ್ಯವಾಗಿಬಿಡುತ್ತವೆ. ಆದ್ದರಿಂದಲೇ ನಾನು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ”, ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.