March 4, 2026
WhatsApp Image 2025-09-05 at 10.21.29 AM

ಬೆಳ್ತಂಗಡಿ:  ಸೆಪ್ಟೆಂಬರ್ 3 ರಂದು ಉಜಿರೆಯಲ್ಲಿ ನಡೆದ ಲಾರಿ-ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಸಮೀಪದ ನಿವಾಸಿ 44 ವರ್ಷದ ಪುರುಷೋತ್ತಮ ಯಾನೆ ಬಾಲು ಮೃತ ವ್ಯಕ್ತಿ. ಬುಧವಾರ ಸಂಜೆ ಉಜಿರೆ ಸಮೀಪ ಅವರು ಚಲಾಯಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದಿತ್ತು.  ಇದರಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಾರೆ ಕಾರ್ಮಿಕರಾಗಿದ್ದ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.