December 6, 2025
WhatsApp Image 2025-09-04 at 9.22.59 AM

ಕುಂದಾಪುರ: ಹನಿಟ್ರ್ಯಾಪ್ ಜಾಲವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬೀಳಿಸಿ ಹಣ ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಈ ಸಂಬAಧ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು(೨೮), ಗುಲ್ವಾಡಿ ಗಾಂಧೀ ಕಟ್ಟೆಯ ಸೈಪು(೩೮), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(೩೬), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(೨೩), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಜೀಜ್(೨೬), ಕುಂದಾಪುರ ಎಂ.ಕೋಡಿಯ ಆಸ್ಮಾ(೪೩) ಎಂದು ಗುರುತಿಸಲಾಗಿದೆ.

ಸಂದೀಪ ಕುಮಾರ್ ಸುಮಾರು ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಸವಾದ್‌ನ ಪರಿಚಯವಾಗಿದ್ದು, ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವದ್, ಆಸ್ಮಾ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟು ಅವರ ಮೊಬೈಲ್ ನಂಬರ್ ಕೊಟ್ಟಿದ್ದನು.

ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿದು ಆಕೆಗೆ ಸಂದೀಪ್ ಕರೆ ಮಾಡಿದ್ದು, ಆಕೆ ಸಂದೀಪ್ ಅವರನ್ನು ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ಅದರಂತೆ ಸಂದೀಪ್ ಸೆ.೨ರಂದು ಸಂಜೆ ೬:೩೦ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್‌ಆರ್ ಪ್ಲಾಝಾ ಬಳಿ ಹೋಗಿದ್ದರು. ಅಲ್ಲಿ ಆಸ್ಮಾ, ಸಂದೀಪ್ ಮನೆಗೆ ಕರೆದುಕೊಂಡು ಹೋಗಿದ್ದಳು.

ಬಳಿಕ ಆಸ್ಮಾ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿ ಸಂದೀಪ್ ಬಳಿ ೩ ಲಕ್ಷ ಹಣ ನೀಡುವಂತೆ ಬೆದರಿಸಿದರು. ಅವರಲ್ಲಿ ಮೊಹಮ್ಮದ್ ನಾಸೀರ್ ಶರೀಫ್ ಚಾಕು ತೋರಿಸಿ ಹಣ ಕೊಡುವಂತೆ ಸಂದೀಪ್‌ಗೆ ಹೆದರಿಸಿದನು ಎಂದು ದೂರಲಾಗಿದೆ.

ಈ ವೇಳೆ ಸಂದೀಪ್ ಅಲ್ಲಿಂದ ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಸವದ್ ಯಾನೆ ಅಚ್ಚು, ಸೈಪು, ಮೊಹಮ್ಮದ್ ನಾಸೀರ್, ಶರೀಫ್, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿ ಹಿಡಿದು ಸಂದೀಪ್ ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಕೈಯಿಂದ ಹಣ ಮಾಡಿದರೆನ್ನಲಾಗಿದೆ. ಸಂದೀಪ್‌ಗೆ ರಾಡ್‌ನಿಂದ ಹೊಡೆದು ಬಳಿಕ ಅವರ ಪ್ಯಾಂಟ್ ಜೇಬಿನಲ್ಲಿದ್ದ ೬,೨೦೦ರೂ.ವನ್ನು ಬಲವಂತದಿಂದ ಕಸಿದುಕೊಂಡರು. ನಂತರ ಆಸ್ಮಾ, ಸಂದೀಪ್‌ಗೆ ಗೂಗಲ್ ಪೇ ಮೂಲಕ ಹಣ ಹಾಕಲು ಒತ್ತಾಯಿಸಿದ್ದು, ಅದರಂತೆ ಪ್ರದೀಪ್ ಗೂಗಲ್ ಪೇ ಮೂಲಕ ಸೈಪು¯ ಖಾತೆಗೆ ೫೦೦೦ರೂ. ಹಣ ವರ್ಗಾವಣೆ ಮಾಡಿದ್ದರು.

ಬಳಿಕ ಆರೋಪಿಗಳು ಇನ್ನೂ ಹೆಚ್ಚಿನ ಹಣವನ್ನು ಹಾಕುವಂತೆ ಸಂದೀಪ್‌ಗೆ ಒತ್ತಾಯಿಸಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆ ಮಾಡಿದರು. ಇದಕ್ಕೆ ಹೆದರಿದ ಸಂದೀಪ್, ಸೈಪು¯್ಲÁನ ಖಾತೆಗೆ ೩೦ಸಾವಿರ ರೂ. ವರ್ಗಾವಣೆ ಮಾಡಿದರು. ನಂತರ ಮತ್ತೆ ಬಲತ್ಕಾರವಾಗಿ ಎಟಿಎಂ ಕಾರ್ಡ್ನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದುಕೊಂಡು, ಆಸ್ಮಾಳ ಮನೆಯ ರೂಮಿನಲ್ಲಿ ಕೂಡಿಹಾಕಿ ಸೈಪು ಮೊಹಮ್ಮದ್ ನಾಸೀರ್ ಶರೀಫ್ ಮತ್ತು ಅಬ್ದುಲ್ ಸತ್ತಾರ್ ಅಲ್ಲಿಯೇ ಇದ್ದು, ಸಂದೀಪ್ ಅವರ ಬ್ಯಾಂಕ್ ಖಾತೆಯಿಂದ ೪೦೦೦೦ರೂ. ಹಣ ಡ್ರಾ ಮಾಡಿಕೊಂಡು, ಎಟಿಎಂ ಕಾರ್ಡ್ ಮತ್ತು ಹಣವನ್ನು ಇಟ್ಟುಕೊಂಡಿದ್ದಾರೆ. ಸಂದೀಪ್ ಅವರನ್ನು ರಾತ್ರಿ ೧೧:೩೦ರ ಸುಮಾರಿಗೆ ಬೆದರಿಸಿ ಕಳುಹಿಸಿಕೊಟ್ಟಿದ್ದಾರೆ.

ಈ ಬಗ್ಗೆ ಸಂದೀಪ್ ಕುಮಾರ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ಬಂಧಿಸಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಟ್ಟು ೧೮,೦೦,೦೦೦ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಎಸ್ಸೈಗಳಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿಗಳಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್, ಭಾಗಿರತಿ ನಾಗಶ್ರೀ ಮತ್ತು ರೇವತಿ ಭಾಗವಹಿಸಿದ್ದರು

About The Author

Leave a Reply

Your email address will not be published. Required fields are marked *

You cannot copy content of this page.