March 18, 2026
WhatsApp Image 2025-03-10 at 5.06.17 PM

ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೆಲ್ಟ್’ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿ ವರದಿಯಾಗಿದೆ.

ಮೃತರನ್ನು ಕೆಳಾರ್ಕಳ ಬೆಟ್ಟಿನ ಸ್ವಸ್ತಿಕ್‌ (16) ಎಂದು ಗುರುತಿಸಲಾಗಿದೆ.

ಮೃತನು ಉಡುಪಿಯ ಜ್ಞಾನ ಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಜುಲೈ 27 ರಂದು ಅವರ ತಾಯಿ ಬಂದು ನೋಡಿದಾಗ ಮನೆಯ ಹಾಲ್‌ ನ ಉತ್ತರ ಬದಿಯ ಕಿಟಕಿಗೆ ನೇಣು ಹಾಕಿಕೊಂಡು ಸೋಫಾದ ಮೇಲೆ ಒರಗಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೆ ಸ್ವಸ್ತಿಕ್‌ ನ ಕುತ್ತಿಗೆಯಲ್ಲಿದ್ದ ಬೆಲ್ಟ್‌ ಅನ್ನು ಕಟ್‌ ಮಾಡಿ ನೆರೆಮನೆಯವರ ಸಹಾಯದಿಂದ ಕಾರಿನಲ್ಲಿ ಗೆರೊಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ಸಲಹೆ ಮೇರೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸ್ವಸ್ತಿಕ್‌ ಈತನು ಈಗಾಗಲೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ದೂರಿನ ಅನ್ವಯ ಮಗ ದಿನಾಂಕ 27/07/2025 ರಂದು ಬೆಳಿಗ್ಗೆ 11:30 ಗಂಟೆಯಿಂದ 01:00 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಮನೆಯಲ್ಲಿನ ಕಿಟಕಿಗೆ ಬೆಲ್ಟ್‌ ಕಟ್ಟಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ಕ್ರಮಾಂಕ 43/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

About The Author

Leave a Reply

Your email address will not be published. Required fields are marked *

You cannot copy content of this page.