March 16, 2026
WhatsApp Image 2025-07-13 at 12.16.29 PM (1)

ಬೆಳ್ತಂಗಡಿ : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 9 ವರ್ಷ 2 ತಿಂಗಳುಗಳಲ್ಲಿ 187 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.

ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 10 ನೇ ವರ್ಷದ ಪಯಣದಲ್ಲಿ 3 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ.

ತಂಡದ 185ನೇ ಸೇವಾಯೋಜ‌ನೆಯಾಗಿ ಮೂಡಬಿದ್ರೆ ತಾಲೂಕಿನ ಶಿರ್ತಾಡಿ ಕಬ್ಯಾರು ಹೊಸಮನೆ ವಾಸಿಯಾಗಿರುವ ಪ್ರಮೀಳಾ ಇವರಿಗೆ ಮತ್ತು ಇವರ ಪತಿಯೂ ಕೂಡ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ವಾಸ ಮಾಡಲು ಸ್ವಂತ ಮನೆಯು ಇಲ್ಲವಾಗಿದೆ ಇವರ ಆರ್ಥಿಕ ಪರಿಸ್ಥಿತಿಯನ್ನು ಕಂಡು ಇವರ ಕುಟುಂಬಕ್ಕೆ 15,000 ರೂಗಳನ್ನು ಹಸ್ತಾಂತರಿಸಲಾಯಿತು.

186ನೇ ಸೇವಾಯೋಜನೆ‌ಯಾಗಿ ವಾಮಂಜೂರಿನ ಬೋಡಂತಿಲ ಗ್ರಾಮ ದೋಟಮನೆ ನಿವಾಸಿಯಾಗಿರುವ ಮಲ್ಲಿಕಾ ಇವರ ಪುತ್ರಿ ಅಶ್ವಿತಾ ಇವರು ಆರ್ಥಿಕವಾಗಿ ಹಿಂದುಳಿದಿದ್ದು ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 15,000 ರೂಗಳನ್ನು ಹಸ್ತಾಂತರಿಸಲಾಯಿತು.

187ನೇ ಸೇವಾಯೋಜನೆ‌ಯಾಗಿ ಬಂಟ್ವಾಳ ತಾಲೂಕಿನ ಕುಂಡಡ್ಕ ಶೆಡ್ಡು ಮನೆ ನಿವಾಸಿಯಾಗಿರುವ ಜೀವನ್ಯ ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.

ಈ 3 ಸೇವಾಯೋಜನೆಗಳಿಗೆ ಒಟ್ಟು ರೂ 40,000 ರೂಪಾಯಿಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.

 

About The Author

Leave a Reply

Your email address will not be published. Required fields are marked *

You cannot copy content of this page.