
ಇತ್ತೀಚೆಗಂತೂ ಸೈಬರ್ ಕ್ರೈಮ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಆ್ಯಪ್ ಮೂಲಕ ಬಂದ ಲಿಂಕ್ ಕ್ಲಿಕ್ಕಿಸಿ ಯುವತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಹಿರಿಯಡ್ಕದ ಪೆರ್ಡೂರಿನಲ್ಲಿ ನಡೆದಿದೆ.
ಪೆರ್ಡೂರಿನ ಶ್ವೇತಾ ಎಂಬವರು ಹಣ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಮೊಬೈಲ್ ನಂಬರಿಗೆ ಬಂದ ಲಿಂಕ್ ಕ್ಲಿಕ್ ಮಾಡಿ ಲೈಕ್ ಕೊಟ್ರೆ ಹೆಚ್ಚು ಹಣ ಗಳಿಸುವುದಾಗಿ ಬಂದಿದ್ದ ಸಂದೇಶ ನೋಡಿ ಇವರು ಯಾಮಾರಿದ್ದಾರೆ.
ಮೆಸೇಜ್ ನಲ್ಲಿ ಇದ್ದಂತೆಯೇ ಮಾಡಿದ ಇವರ ಖಾತೆಯಿಂದ ಬರೋಬ್ಬರಿ 3,60,800 ರೂ ಕಳೆದುಕೊಂಡಿದ್ದಾರೆ. ಮೋಸ ಹೋಗಿರುವ ಶ್ವೇತಾ ಅವರು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
