March 19, 2026
WhatsApp Image 2025-02-01 at 9.18.08 AM
ಕಾರ್ಕಳ:  ಇಂದು ಮುಸ್ಸಂಜೆ ಸುಮಾರು 7.30ಕ್ಕೆ ಕಾರ್ಕಳದ ಆನೆಕೆರೆ ಮಸೀದಿ ಬಳಿಯಲ್ಲಿ ಅಪರಿಚಿತ ಘನ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರ್ಕಳದ ಹಿರಿಯಂಗಡಿ ನಿವಾಸಿ ಕೂಲಿ ಕಾರ್ಮಿಕ ಹರೀಶ್ ಪೂಜಾರಿ (63) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಹರೀಶ್ ಪೂಜಾರಿ ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಯ ಕಡೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಅಪರಿಚಿತ ಘನ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದು ವಾಹನ ಪರಾರಿಯಾಗಿದೆ. ಹರೀಶ್ ಪೂಜಾರಿ ಅವರ ದೇಹದ ಮೇಲೆಯೇ ವಾಹನದ ಚಕ್ರ ಚಲಿಸಿದ ಪರಿಣಾಮ ದೇಹವು ಸಂಪೂರ್ಣ ಚಿದ್ರಚಿದ್ರವಾಗಿದೆ.
ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.