March 4, 2026
WhatsApp Image 2025-01-18 at 3.24.10 PM
ಉಡುಪಿ: ಕಾರ್ಕಳ ಸಮೀಪದ ಹೆಬ್ರಿ ಬಳಿಯ ಶೇಡಿಮನೆ ಗ್ರಾಮದ ಕೃಷ್ಣ ಕುಲಾಲ್ ಅವರಿಗೆ ಹೆಬ್ರಿ ತಾಲೂಕು ಸರ್ವೆ   ಅಧಿಕಾರಿಯಾದ ರವಿರಾಜ್ ಅವರು ತನ್ನ ಅಧಿಕಾರದ ದರ್ಪದಿಂದ ಕೃಷ್ಣ ಕುಲಾಲ್ ಅವರ ಜಾಗದ ಸಂಬಂಧ  ಪದೇ ಪದೇ ಇವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ನ್ಯಾಯಾಲಯದ ಶಾಶ್ವತ ತಡೆ ಆಜ್ಞೆ  ಆದೇಶವು ಇದ್ದರೂ ಸರ್ವೆ ಅಧಿಕಾರಿ ಇವರ ಜಾಗಕ್ಕೆ ಬಂದು ನಿಮ್ಮ ಜಾಗವನ್ನು ತೆರವುಗೊಳಿಸುವ ಆದೇಶವಿದೆ ಎಂದು  ಹೆದರಿಸುತ್ತಾರೆ. ಮತ್ತು ಇದನ್ನು ಸರಿಪಡಿಸಲು ತನಗೆ ಲಂಚ ಕೊಡಬೇಕೆಂದು ಸರ್ವೆ ಅಧಿಕಾರಿ ಪೀಡಿಸುತ್ತಿದ್ದಾರೆ.
ಈ ಬಗ್ಗೆ ಇವರ ವಿರುದ್ಧ ಮಾನ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ನೊಂದ ಕೂಲಿ ಕಾರ್ಮಿಕ ಕೃಷ್ಣ ಕುಲಾಲ್   ಹಾಗೂ ಅವರ ಸಂಬಂಧಿ  ಗಣೇಶ್ ಕುಲಾಲ್  ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.