ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತರಲು ಸಜ್ಜಾಗಿದೆ.
ಇನ್ಮುಂದೆ ಪತಿ ಅಥವಾ ಪತ್ನಿ ಆಲ್ಲದೆ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಲಾಗಿತ್ತದೆ. ಎಲ್ಲಾ ವಿವಾಹೇತರ ಸಂಬಂಧಗಳೂ ಇನ್ಮುಂದೆ ನಿಷಿದ್ಧ. ವಿವಾಹ ಹೊರತುಪಡಿಸಿ ಉಳಿದ ಕಡೆ ಸೆಕ್ಸ್ ಮಾಡಲು ತೊಡಗಿದರೆ ಇನ್ನೂ ಶಿಕ್ಷೆ ಕಾದಿದೆ. ಈಗಿರುವ ಆರ್ಟಿಕಲ್ 415 ರಲ್ಲಿ ಉಲ್ಲೇಖಿಸಿದಂತೆ ಅಂತಹಾ ಸೆಕ್ಸ್ ಮಾಡುವವರಿಗೆ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಅಂದಹಾಗೆ ಇಂತಹಾ ವಿವಾಹೇತರ ಸಂಬಂಧಗಳಿಗೆ ಕಡಿವಾಣ ಹಾಕಲು ಹೊರಟಿರೋದು ಭಾರತದ ಸರ್ಕಾರವಲ್ಲ. ಇಂಡೋನೇಷ್ಯಾದ ಸರಕಾರ ಈಗ ಮದುವೆಯೇತರ ಸೆಕ್ಸ್ ಗಳಿಗೆ ಕಡಿವಾಣ ಹಾಕಲು ಹೊರಟಿದೆ. ಇಂಡೋನೇಷ್ಯಾ ಹೇಳಿಕೇಳಿ ಫ್ರೀ ಸೆಕ್ಸ್ ಅನ್ನು ಆಚರಿಸುವ ದೇಶ. ಅದು ಮುಸ್ಲಿಂ ರಾಷ್ಟ್ರವಾಗಿದ್ದರೂ ಕೂಡ ಅಲ್ಲಿ ಶರಿಯತ್ ಕಾನೂನು ಅನ್ವಯವಾಗಿಲ್ಲ. ಇದೀಗ ಕಠಿಣ ಕಟ್ಟುಪಾಡುಗಳ ಮುಸ್ಲಿಂ ರಾಷ್ಟ್ರವಾಗಲು ಇಂಡೋನೇಷ್ಯಾ ಹೊರಟಿದೆಯೇ ಇರುವ ಬಗ್ಗೆ ಚರ್ಚೆ ಉತ್ಪತ್ತಿಯಾಗಿದೆ.
ವಿವಾಹೇತರ ಸಂಬಂಧಗಳು ಮದುವೆಯಾಗದೆ ಸೆಕ್ಸ್ ಮಾಡಬಾರದು ಎಂಬ ಕಾನೂನುಗಳು ಕೇವಲ ಅಲ್ಲಿನ ಪ್ರಜೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂಡೋನೇಶಕ್ಕೆ ಬರುವ ಎಲ್ಲಾ ಟೂರಿಸ್ಟ್ ಗಳಿಗೂ ಈ ನೀತಿ ಅನ್ವಯವಾಗಿರಲಿದೆ. ಇಂಡೋನೇಷ್ಯಾದ ಬಹುಪಾಲು ಆದಾಯವು ಅಲ್ಲಿನ ಬೀಚ್ಗಳು ಮತ್ತು ಇತರ ಟೂರಿಸ್ಟ್ ಸ್ಥಳಗಳಿಂದ ಬರುತ್ತಿದೆ. ಉಚಿತ ಸೆಕ್ಸ್ ನ ಆಸೆಯಿಂದ ಅಲ್ಲಿಗೆ ಬರುವವರ ಸಂಖ್ಯೆ ಗಣನೀಯವಾಗಿದೆ. ಆದುದರಿಂದ ಸರಕಾರದ ನಿರ್ಧಾರವು ಇಂಡೋನೇಷ್ಯಾದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.
ತನ್ನ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ. ಈ ಡಿಸೆಂಬರ್ ತಿಂಗಳಿನಲ್ಲಿ ಈ ಕಾನೂನು ಸಂಸತ್ತಿನಲ್ಲಿ ಮಂಡನೆ ಆಗಲಿದೆ. ಅಷ್ಟೇ ಅಲ್ಲದೆ ಅಲ್ಲಿನ ಪ್ರಧಾನಿಯನ್ನು ಮತ್ತು ಸರಕಾರದ ಆಯಕಟ್ಟಿನ ಅವಮಾನಿಸುವ ಹಾಗಿಲ್ಲ. ಹಾಗೊಂದು ವೇಳೆ ಯಲ್ಲಿ ಅಂಥವರಿಗೆ ನೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಜೊತೆಗೆ ಹಿಂದೆ ಇದ್ದಂತೆ ಬ್ಲಾಕ್ ಮ್ಯಾಜಿಕ್ ಕೂಡ ಇಂಡೋನೇಷ್ಯಾದಲ್ಲಿ ಬ್ಯಾನ್ ಆಗಿರಲಿದೆ.