ಬೆಂಗಳೂರು : ಗೋಹತ್ಯೆ ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಇಂದು ವಿಕಾಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಭು ಚೌಹ್ಹಾಣ್ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದ ಮೇಲೆ ಗೋವುಗಳ ಹತ್ಯೆ ಸಂಖ್ಯೆ ಇಳಿಕೆಯಾಗುತ್ತಿದೆ, ಕಾನೂನು ಉಲ್ಲಂಘಿಸಿ ಗೋಹತ್ಯೆ ಎಸಗುವ ಆರೋಪಿಗಳಿಗೆ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ 1964ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿತ್ತು, ಆಗ ಗೋಹತ್ಯೆಗೆ 1 ಸಾವಿರ ದಂಡ, 6 ತಿಂಗಳು ಜೈಲು ಶಿಕ್ಷೆ ಇತ್ತು. ಈಗ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ, ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಭಾರತದಲ್ಲಿ 29 ರಾಜ್ಯಗಳಲ್ಲಿ 24 ರಾಜ್ಯಗಳಲ್ಲಿ ಪ್ರಸ್ತುತ ಹಸುಗಳ ವಧೆ ಅಥವಾ ಮಾರಾಟವನ್ನು ನಿಷೇಧಿಸುವ ಹಲವಾರು ಕಾನೂನು ನಿಯಮಗಳನ್ನು ಹೊಂದಿವೆ. ಭಾರತದಲ್ಲಿ ಜಾನುವಾರು ವಧೆ ಐತಿಹಾಸಿಕವಾಗಿ ನಿಷೇಧಿತ ವಿಷಯ. ಏಕೆಂದರೆ ಹಿಂದೂ ಧರ್ಮದಲ್ಲಿ ಹಸು ದೇವರ ಗೌರವಾನ್ವಿತ ಜೀವಿ. ಗೋ ಮಾತೆಯು ಪೂಜನೀಯ ಪ್ರಾಣಿ ಹಸುವಿನ ಉತ್ಪನ್ನಗಳು, ಡೈರಿ ಉತ್ಪನ್ನಗಳು ವ್ಯಾಪಕವಾಗಿ ಹಿಂದೂ ಸಂಸ್ಕೃತಿಯಲ್ಲಿ ದೈವಿಕ ಕಾರ್ಯಗಳಲ್ಲಿ ಬಳಸಲ್ಪಡುತ್ತವೆ. ಭಾರತದ ಸಂವಿಧಾನದ 48 ನೇ ವಿಧಿಯು ಹಸುಗಳು ಮತ್ತು ಕರುಗಳು ಮತ್ತು ಇತರ ಮಿಲ್ಕ್ ಮತ್ತು ಡ್ರಾಫ್ಟ್ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವಂತೆ ರಾಜ್ಯಗಳಿಗೆ ಆದೇಶಿಸುತ್ತದೆ.