March 20, 2026
WhatsApp Image 2024-11-22 at 10.37.27 AM

ಪಡುಬಿದ್ರಿ: ಟೊಯೋಟಾ ಕಂಪೆನಿಗೆ ಕಾರನ್ನು ಖರೀದಿಸಿ ನೀಡುವ ಮೂಲಕ ತಿಂಗಳಿಗೆ ಸಾಲದ ಕಂತು ಕಡಿತಗೊಳಿಸಿದ ಬಳಿಕ 1 ಲಕ್ಷ ರೂ. ಗಳಿಕೆಯ ಆಮಿಷವೊಡ್ಡಿ ಪಡುಬಿದ್ರಿಯ ಗಂಗಾಧರ ಗಾಂಧಿ ಅವರನ್ನು ನಂಬಿಸಿ, ಅವರಿಂದ ಹಾಗೂ ಇನ್ನಿಬ್ಬರಿಂದ ಒಟ್ಟು 15 ಲಕ್ಷ ರೂ.ಗಳನ್ನು ಪಡೆದು ಮೋಸ ಮಾಡಿ ಜೀವ ಬೆದರಿಕೆ ಹಾಕಿರುವ ಕುರಿತಾಗಿ ಬಿಜಾಪುರದ ಕಾರು ಚಾಲಕ ನಾಮದೇವ ತವರಟ್ಟೆ ಹಾಗೂ ಆತನ ಸಹೋದರನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಡಿ. 15ರಂದು ಪ್ರಕರಣ ದಾಖಲಾಗಿದೆ.ಪಡುಬಿದ್ರಿ ಸುಜ್ಲಾನ್‌ ಕಾಲನಿ ನಿವಾಸಿ ಗಂಗಾಧರ ಗಾಂಧಿ ಅವರು ಸರಕಾರೇತರ ಸಂಸ್ಥೆ ಎನ್‌ಎಸ್‌ಸಿಡಿಎಫ್‌ನ ಅಧ್ಯಕ್ಷರಾಗಿದ್ದು, 2022ರಲ್ಲಿ ಬಿಜಾಪುರದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕಾರು ಚಾಲಕನಾಗಿ ಆರೋಪಿ ನಾಮದೇವನ ಪರಿಚಯವಾಗಿತ್ತು. ಆತ ತಾನು 4 ಟೊಯೋಟಾ ಕಾರುಗಳನ್ನು ಖರೀದಿಸಿ ಟೊಯೋಟಾ ಕಂಪೆನಿಗೇ ಗುತ್ತಿಗೆಗೆ ನೀಡಿದ್ದು, ತಿಂಗಳಿಗೆ 4 ಲಕ್ಷ ರೂ. ಬರುತ್ತಿರುವುದಾಗಿ ಹೇಳಿದ್ದ. ನೀವೂ ಹೀಗೆ ಕಾರನ್ನು ನೀಡುವುದಾದಲ್ಲಿ ತಿಂಗಳಿಗೆ ಒಂದು ಲಕ್ಷ ರೂ. ಅನಾಯಾಸವಾಗಿ ಖಾತೆಗೆ ಜಮೆಯಾಗುತ್ತಿರುತ್ತದೆ ಎಂದು ಗಂಗಾಧರ ಗಾಂಧಿ ಅವರನ್ನು ನಂಬಿಸಿದ್ದ.

ಅದರಂತೆ 2024ರ ಆಗಸ್ಟ್‌ ತಿಂಗಳಲ್ಲಿ ದೂರುದಾರ ಗಂಗಾಧರ ಗಾಂಧಿ ಸಹಿತ ಸರಕಾರೇತರ ಸಂಸ್ಥೆಯ ಮಂಗಳೂರು ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಹಾಗೂ ವಕ್ತಾರೆ, ಮುಂಬಯಿ ನಿವಾಸಿ ಮಮತಾ ಕೋಟ್ಯಾನ್‌ ಎನ್ನುವವರ ಜತೆ ಸೇರಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೂಲಕ ನಾಮದೇವ ತವರಟ್ಟೆಗೆ 15 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ಬಳಿಕ ತಿಂಗಳುಗಳು ಕಳೆದರೂ, ಯಾವೊಂದೂ ಆದಾಯದ ಸುಳಿವಿಲ್ಲದ ಕಾರಣದಿಂದ ಆರೋಪಿಯನ್ನು ಸಂಪರ್ಕಿಸಿದಾಗ ಆತ ನಿಮಗೆ ಚಿಂತೆ ಬೇಡ. ನಾನು ಟೊಯೋಟಾ ಆಡಳಿತ ನಿರ್ದೇಶಕ ಅಶೋಕ್‌ ಪಾಟೀಲ್‌ ಅವರೊಂದಿಗೆ ಮಾತನಾಡಿಸುವುದಾಗಿ ಹೇಳಿದ್ದ.

About The Author

Leave a Reply

Your email address will not be published. Required fields are marked *

You cannot copy content of this page.