ಮೂಡಬಿದ್ರೆ: ಇಂದು ಬೆಳಿಗ್ಗೆ ಕಡಂದಲೆ ಶಾಂಭವಿ ನದಿಯಲ್ಲಿ ದನದ ಎರಡು ತಲೆಗಳು ಸ್ಥಳೀಯರಿಗೆ ಪತ್ತೆಯಾಗಿದೆ. ಮಾಂಸಕ್ಕಾಗಿ ದನಗಳನ್ನು ಕೊಂದು ಬಳಿಕ ಅದರ ತಲೆಗಳನ್ನು ನದಿಗೆ ತಂದು ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಪರಿಸರದಲ್ಲಿ ಅಕ್ರಮ ಕಸಾಯಿ ಖಾನೆ ಇದೆಯೇ ಎಂಬ ಪ್ರಶ್ನೆ ಇದೀಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ದನ ಹಾಗೂ ಕರುವನ್ನು ಮಾಂಸಕ್ಕಾಗಿ ಹತ್ಯೆ ಮಾಡಿ ಬಳಿಕ ಅದರ ತಲೆಗಳನ್ನು ನದಿಗೆ ಹಾಕಲಾಗಿದೆ ಎನ್ನಲಾಗಿದೆ. ಅದು ನದಿಯ ಪೊದೆಯಲ್ಲಿ ಸಿಲುಕಿದ ಕಾರಣ ಇಂದು ಸ್ಥಳೀಯರಿಗೆ ಕಾಣಸಿಕ್ಕಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮೂಡಬಿದ್ರೆ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಘಟನಾ ಸ್ಥಳ ಕಾರ್ಕಳ ಠಾಣೆಯ ಪರಿಮಿತಿಗೋ ಅಥವಾ ಮೂಡುಬಿದಿರೆ ಠಾಣೆಯ ಪರಿಮಿತಿಗೋ ಎಂಬ ಪ್ರಶ್ನಾರ್ಥಕವಾಗಿದ್ದಾರೆ.
ಏನಿದ್ದರೂ ಪೊಲೀಸರು ಕೂಡಲೇ ಅಕ್ರಮ ಕಸಾಯಿಖಾನೆಯ ಜಾಡು ಹತ್ತಿ ಮಟ್ಟ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.