March 21, 2026
WhatsApp Image 2024-08-06 at 10.14.53 AM

ಮೂಡುಬಿದಿರೆ: ಪರಿಚಿತನಂತೆ ಮಹಿಳೆ ಜತೆ ಮಾತನಾಡಿ ಆಕೆಯ ಮೂರೂವರೆ ಪವನಿನ ಸರವನ್ನು ವ್ಯಕ್ತಿಯೊಬ್ಬ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲು ನಾರಾವಿಯಿಂದ ಬಂದಿದ್ದ ಮಧ್ಯ ವಯಸ್ಸಿನ ಮಹಿಳೆಯು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಚಿಕ್ಕಮ್ಮನೆಂದು ಕರೆದು ಪರಿಚಯಿಸಿಕೊಂಡಿದ್ದ ಆಗಂತುಕ, ಮಹಿಳೆಯ 4 ಮನೆಯವರ ಪರಿಚಯವನ್ನೆಲ್ಲ ಹೇಳಿ ವಿಶ್ವಾಸ ಗಳಿಸಿಕೊಂಡ ಬಳಿಕ ಆಕೆಯನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ ಚಹಾ ಕುಡಿಸಿದ್ದ. ಅನಂತರ ಹೊರಗಡೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ವೀಕ್ಷಿಸಿ, ಅದೇ ಡಿಸೈನ್ ಮಾದರಿಯ ಸರ ತನ್ನ ಮಗಳಿಗೂ ಖರೀದಿಸಲಿದೆ ಇದನ್ನು ತೋರಿಸಿ ಬರುವುದಾಗಿ ಹೇಳಿದಾಗ, ಮಹಿಳೆಯು ಕುತ್ತಿಗೆಯಿಂದ ಸರ ತೆಗೆದುಕೊಟ್ಟಿದ್ದಾರೆ. ಅಲ್ಲದೆ ಹಣ್ಣು ಹಂಪಲು ತರುವುದಾಗಿ ಮಹಿಳೆಯಿಂದಲೇ 1,000 ರೂ. ತೆಗೆದುಕೊಂಡು ಹೋಗಿದ್ದಾನೆ. ತುಂಬಾ ಹೊತ್ತು ಆತ ಬಾರದೆ ಇದ್ದಾಗ ಮೋಸ ಹೋದುದು ಗೊತ್ತಾಯಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.