March 21, 2026
WhatsApp Image 2024-06-28 at 8.44.41 AM

ಡುಪಿ: ಮಣಿಪಾಲದಿಂದ ಹೆರ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ತೋಡಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.

ಕೆಳಪರ್ಕಳದ ಬಳಿ ತೆರಳುತ್ತಿದ್ದಾಗ ಚಾಲಕನ ಮೂರ್ಛೆ ಬಂದಿದ್ದು ಕೂಡಲೇ ಅವರು ಸ್ಟೇರಿಂಗ್‌ ಬಿಟ್ಟಿದ್ದಾರೆ.

ಈ ವೇಳೆ ಬಸ್‌ ಹಿಮ್ಮುಖವಾಗಿ ಚಲಿಸಿದೆ. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಕ್ಕೆ ಹಾರಲು ಯತ್ನಿಸಿದ್ದಾರೆ. ಬಸ್‌ ತೋಡಿಗೆ ಬಿದ್ದು ಅಲ್ಲೇ ನಿಂತಿದೆ. ಸ್ವಲ್ಪ ಹಿಂದಕ್ಕೆ ತೆರಳುತ್ತಿದ್ದರೆ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಬಸ್ಸಿನಲ್ಲಿ 30-40 ಮಂದಿ ಪ್ರಯಾಣಿಕರು ಇದ್ದರು. ಚಾಲಕನನ್ನು ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಪ್ರಯಾಣಿಕರು ಮತ್ತೊಂದು ಬಸ್ಸಿನಲ್ಲಿ ತೆರಳಿದ್ದಾರೆ. ಬಸ್ಸಿನ ಹಿಂಭಾಗ ಜಖಂಗೊಂಡಿದೆ.

About The Author

Leave a Reply

Your email address will not be published. Required fields are marked *

You cannot copy content of this page.